January 6, 2025

Newsnap Kannada

The World at your finger tips!

nutri

ಅಪೌಷ್ಠಿಕತೆಯಿಂದ ಬಳಲುವ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ – ನ್ಯಾ. ವಸ್ತ್ರಮಠ ಸಲಹೆ

Spread the love

ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲ ಬಾರದು. ಅಪೌಷ್ಟಿಕತೆಯ ನಿವಾರಣೆಗೆ ಸರ್ಕಾರ ಹಲವಾರು ಯೋಜನೆ ಗಳನ್ನು ಜಾರಿಗೊಳಿಸಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಕ ಎಸ್.ಬಿ.ವಸ್ತಮಠ ಕರೆ ನೀಡಿದರು. ‌

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪಿಇಎಸ್ ಕಾನೂನು ಕಾಲೇಜು ಮತ್ತು ಕಾನೂನು ಸಲಹಾ ಕೇಂದ್ರ, ಸಾಂಥೋಂ ಪಬ್ಲಿಕ್ ಸ್ಕೂಲ್ ಹಾಗೂ ವಕೀಲರ ಸಂಘದ ವತಿಯಿಂದ ತಾಲೂಕಿನ ಕ್ಯಾತುಂಗೆರೆ ಗ್ರಾಮದ ಬಳಿ ಇರುವ ಸಾಂಥೋಂ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆದ ವಿಶ್ವ ಪೌಷ್ಟಿಕ ಆಹಾರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ವಸ್ತ್ರಮಠ ಅವರು ಮಾತನಾಡಿದರು

ಅಪೌಷ್ಠಿಕತೆ ಇದ್ದರೆ ಅಂತಹದ ಮಕ್ಕಳು ಕಾಯಿಲೆಗೆ ಒಳಗಾಗಬಹುದು ಇಲ್ಲವೇ ಸಾವು ಸಂಭವಿಸಬಹುದು. ಇಂತಹದನ್ನು ತಡೆಗಟ್ಟುವ ಸಲು ವಾಗಿ ತಕ್ಷಣ ಕ್ರಮ ಕೈಗೊಂಡು ಮಗು ಮತ್ತು ತಾಯಿಯನ್ನು ಜಿಲ್ಲಾ ಅತ್ರೆಗೆ ದಾಖಲಿಸಿ ಚಿಕಿತ್ಸೆ ಮತ್ತು ಪೌಷ್ಟಿಕಾಂಶವುಳ್ಳ ಆಹಾರ, ನೀಡಬೇಕು ಎಂದು ಹೇಳಿದರು.

ಕೂಲಿ ಮಾಡಿ ಬದುಕು ಸಾಗಿಸಬೇಕು ಇಂಥ ಪರಿಸ್ಥಿತಿಯಲ್ಲಿ ಹೇಗೆ ಆಸ್ಪತ್ರೆಗೆ ಹೋಗುವುದು ಎಂದು ಬಡವರು ಪ್ರಶ್ನಿಸುತ್ತಾರೆ ಅದಕ್ಕೆ ಸರ್ಕಾರ ಕೂಲಿ ಕಾರ್ಮಿಕರಿಗೆ ವೇತನ ಹಾಗೂ ಮಗುವಿಗೆ ಪೌಷ್ಠಿಕ ಆಹಾರ ಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳ, ಬೇಕು ಎಂದು ಸಲಹೆ ನೀಡಿ ದರು.

ಆಹಾರ ಇಲ್ಲದಿದ್ದರೆ ಬದುಕ ಲಾಗದು, ಮಹಾತ್ಮಾಗಾಂಧಿ ಅವರು 20 ರಿಂದ 22 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಚಪಾತಿ, ಪರೋಟ ತಿನ್ನುತ್ತಿದ್ದ ಅವರು ದೇಹವನ್ನು ಚೆನ್ನಾಗಿ ಪಳಗಿಸಿದ್ದರು. ಅಂದಿನ ಆಹಾರವೂ ಉತ್ತಮವಾಗಿರುತ್ತಿತ್ತು ಎಂದರು.

ಒಳ್ಳೆಯ ಆಹಾರ ಸೇವನೆ ಮಾಡದಿದ್ದರೆ ದೇಹದ ಬೆಳವಣಿಗೆ ಆಗುವುದಿಲ್ಲ.
ಮರಗಳಿಗೂ ಫಲವತ್ತಿನ ಕೊರತೆಯಾದಲ್ಲಿ ಸೊರಗುತ್ತದೆ.
ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸಬೇಕಾಗುತ್ತದೆ. ಇಲ್ಲದಿ ರರ ಅಪೌಷ್ಟಿಕತೆಯಿಂದ ಮಗು ಬಳಲುತ್ತದೆ. ಹಲವು ಕಾಯಿಲೆ ಗಳಿಗೆ ತುತ್ತಾಗಬೇಕಾಗುತ್ತದೆ ಎಂದು ತಿಳಿಸಿದರು.

ಪಾಶ್ಚಿಮಾತ್ಯ ಆಹಾರ ಪದ್ದತಿಗೆ ಮಾರುಹೋಗುತ್ತಿದ್ದೇವೆ. ಜಂಕ್‌ಫುಡ್‌ಗೆ ಮೋರೆ ಹೋಗಿ ನಮ್ಮ ಅರೋಗ್ಯವನ್ನು ನಾವೇ ತಂದುಕೊಳ್ಳುತ್ತಿದ್ದೇವೆ. ಭಾರ ತೀಯ ಆಹಾರ ಪದ್ಧತಿ ತುಂಬಾ ಚೆನ್ನಾಗಿತ್ತು. ಅದನ್ನು ಮತ್ತೆ ತೋರುವ ಅಗತ್ಯವಿದೆ ಸಾತ್ವಿಕ ಆಹಾರ ಸೇವನೆಯಿಂದ ದೇಹ ಉತ್ತಮವಾಗಿರುತ್ತದೆ ಮೆದುಳು ಇಂದ್ರಿಯಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ ಒಳ್ಳೆಯ ಯೋಚನೆ ಮಾಡುತ್ತದೆ ಎಂದರು .

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನ್ಯಾಯಾಧೀಶ ಎ ಎಂ ನಳಿನಿಕುಮಾರಿ ಅವರು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು .

ಸಾಂತೋಂ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಅನಿಶ್ ಕೊಫ್ ಅಧ್ಯಕ್ಷ ವಹಿಸಿದ್ದರು. ಪಿಇಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಜಿ. ಯೋಗೀಶ್, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್ ಶಿವಕುಮಾರ್ ಪ್ರಾಧ್ಯಾಪಕ ಡಾ.ಕೆ.ಎಸ್. ಜಯ ಕುಮಾರ್‌ ಸಮಾರಂಭದಲ್ಲಿ ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!