September 21, 2021

Newsnap Kannada

The World at your finger tips!

‘ಲವ್​​ ಯು ರಚ್ಚು’ ಫೈಟರ್ ಸಾವು: ಪೊಲೀಸ್ ವಿಚಾರಣೆಗೆ ಬಿಡದಿಗೆ ಬಂದ ನಟಿ ರಚಿತಾ ರಾಮ್

Spread the love

ಲವ್​ ಯು ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತ ಪ್ರಕರಣ ಸಂಬಂಧ ನಟಿ ರಚಿತಾ ರಾಮ್ ಮಂಗಳವಾರ ಸಂಜೆ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಆಗಸ್ಟ್​ 9 ರಂದು ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ವಿದ್ಯುತ್ ಶಾಕ್ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು.

ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಿತ್ರದ ನಾಯಕಿ ಆಗಿರುವ ರಚಿತಾ ರಾಮ್ ಅವರಿಗೆ ಬಿಡದಿ ಪೊಲೀಸ್ ಠಾಣೆ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ರಚಿತಾ ರಾಮ್ ಬಿಡದಿ ಠಾಣೆಗೆ ಬಂದು ವಿಚಾರಣೆ ಎದುರಿಸಿದರು.‌

error: Content is protected !!