ನಟ, ಮಾಡೆಲ್ ‘ಆದಿತ್ಯ ಸಿಂಗ್ ರಜಪೂತ್’ ಶವವಾಗಿ ಪತ್ತೆ

Team Newsnap
1 Min Read
Actor, model 'Aditya Singh Rajput' found dead ನಟ, ಮಾಡೆಲ್ 'ಆದಿತ್ಯ ಸಿಂಗ್ ರಜಪೂತ್' ಶವವಾಗಿ ಪತ್ತೆ

ನಟ ಮತ್ತು ರೂಪದರ್ಶಿ ಆದಿತ್ಯ ಸಿಂಗ್ ರಜಪೂತ್ ತಮ್ಮ 11ನೇ ಮಹಡಿಯ ಎತ್ತರದ ಕಟ್ಟಡದ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಅಸಲಿಗೆ ನಟನ ಮನಗೆ ಆತನ ಸ್ನೇಹಿತ ಆಗಮಿಸಿದ್ದು, ಆತ ಶೌಚಾಲಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದನ್ನು ಕಂಡುಕೊಂಡಿದ್ದಾನೆ.

ನಂತರ ಕಟ್ಟಡದ ಭದ್ರತಾ ಸಿಬ್ಬಂದಿ ಸಹಾಯದಿಂದ ಪಕ್ಕದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ನಟ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ವರದಿಗಳ ಪ್ರಕಾರ, ಸಾವಿಗೆ ಕಾರಣ ಡ್ರಗ್ ಓವರ್ಡೋಸ್ ಆಗಿರಬಹುದು.ಆದಿತ್ಯ ದೆಹಲಿ ಮೂಲದವರು ರೂಪದರ್ಶಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಪತ್ರಕರ್ತ ಕೆ.ವಿ ಪ್ರಭಾಕರ್ ಸಿಎಂ ಮಾಧ್ಯಮ ಸಲಹೆಗಾರ

ಕ್ರಾಂತಿವೀರ್ ಮತ್ತು ಮೈನೆ ಗಾಂಧಿ ಕೋ ನಹೀನ್ ಮಾರಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಅವರು ಸುಮಾರು 300 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದು, ಲವ್, ಆಶಿಕಿ, ಕೋಡ್ ರೆಡ್, ಆವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4 ಮತ್ತು ಇತರ ಟಿವಿ ಯೋಜನೆಗಳಲ್ಲಿ ಕೂಡ ಭಾಗವಹಿಸಿದ್ದರು.

Share This Article
Leave a comment