ಬಾಲಿವುಡ್ ಚಿತ್ರ ನಟ ಮಹೇಶ್ ಮಂಜ್ರೇಕರ್ ಗೆ ಬೆದರಿಕೆ :ಆರೋಪಿಯ ಬಂಧನ

Team Newsnap
1 Min Read

ಮಹಾರಾಷ್ಟ್ರದ ಮುಂಬಯಿನಲ್ಲಿ ಕುಖ್ಯಾತ ಭೂಗತ ಲೋಕದ ಪಾತಕಿ ಅಬು ಸಲೀಂ ಹೆಸರಿನಲ್ಲಿ ವ್ಯಕ್ತಿಯೊಬ್ಬ ಚಿತ್ರ ನಿರ್ಮಾಪಕ ಹಾಗೂ ನಟ ಮಹೇಶ್ ಮಂಜ್ರೇಕರ್ ಗೆ ಕರೆ ಮಾಡಿ ಕೋಟ್ಯಾಂ ತರ ರೂಪಾಯಿ ಬೇಕೆಂದು ಬೆದರಿಕೆ ಹಾಕಿದ್ದಾನೆ.ಬೆದರಿಕೆ ಹಾಕಿದ ಒಬ್ಬ ಅಪರಾಧಿಯನ್ನು ಮುಂಬಯಿ ಕ್ರೈಮ್ ಬ್ರಾಂಚ್ ಪೊಲೀಸರ ತಂಡ ಬಂಧಿಸಿದೆ.

ಚಿತ್ರ ನಟ ಮಹೇಶ್ ಮಂಜ್ರೇಕರ್ ಅವರಿಗೆ ಧಾರವಿಯಲ್ಲಿ ಚಹಾದ ಅಂಗಡಿಯ ಮಿಲಿಂದ್ ತುಳಶಂಕರ್ ಎನ್ನುನ ಆರೋಪಿ ಅಬು ಸಲೀಂ ಹೆಸರಿನಲ್ಲಿ 35 ಕೋಟಿ ರೂಪಾಯಿ ಕೊಡಬೇಕೆಂದು ಬೆದರಿಕೆ ಹಾಕಿ ಬೇಡಿಕೆ ಇಟ್ಟಿದ್ದ.ಮುಂಬಯಿ ಪೊಲೀಸ್ ಕ್ರೈಮ್ ಬ್ರಾಂಚ್ ಅಧಿಕಾರಿ ಸಚಿನ್ ಕದಮ್ ತಂಡ ವಿಷಯ ತಿಳಿದ ಕೂಡಲೇ ಆರೋಪಿ ಮಿಲಿಂದ್ ತುಳಶಂಕರ್ ನನ್ನು ಬಂಧಿಸಿ ಆತನ ಬಳಿ ಇದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Share This Article
Leave a comment