ನಟ ಕಿಚ್ಚ ಸುದೀಪ್ – ಡಿಕೆಶಿ ಕುತೂಹಲ ಮೂಡಿಸಿದ ಭೇಟಿ: ರಾಜಕೀಯ ಉದ್ದೇಶವಿಲ್ಲ

Team Newsnap
1 Min Read
Actor Kiccha Sudeep - DKshi interesting meeting: No political motive ನಟ ಕಿಚ್ಚ ಸುದೀಪ್ - ಡಿಕೆಶಿ ಕುತೂಹಲ ಮೂಡಿಸಿದ ಭೇಟಿ: ರಾಜಕೀಯ ಉದ್ದೇಶವಿಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿಢೀರ್ ಅಂತ ನಟ ಕಿಚ್ಚ ಸುದೀಪ್ ಮನೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ನಟಿ ರಮ್ಯಾ ಮೂಲಕ ಸುದೀಪ್ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿದೆ. ಈ ಬೆನ್ನಲ್ಲೇ ಕ್ರಾಂಗೆಸ್ ಪಕ್ಷದ ಅಧ್ಯಕ್ಷರು ಸುದೀಪ್ ಮನೆಗೆ ಹೋಗಿದ್ದರೆ. ಇದು ಚರ್ಚೆಗೆ ಕಾರಣವೂ ಆಗಿದೆ.ನಿರ್ದೇಶಕ ಕೆ . ವಿಶ್ವನಾಥ್ ಇನ್ನಿಲ್ಲ

ನಾನೊಬ್ಬ ನಟ, ನನಗೆ ರಾಜಕೀಯ ಗೊತ್ತಿಲ್ಲ. ಹಾಗಾಗಿ ಆ ಕ್ಷೇತ್ರಕ್ಕೆ ಹೋಗಲಾರೆ ಎಂದು ಹಲವಾರು ಬಾರಿ ಸುದೀಪ್ ಹೇಳಿದ್ದರೂ, ಪದೇ ಪದೇ ರಾಜಕಾರಣದಲ್ಲಿ ಸುದೀಪ್ ಹೆಸರು ಕೇಳಿ ಬರುತ್ತಲೇ ಇದೆ.

ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ, ಟಿಕೆಟ್ ಘೋಷಣೆಯಷ್ಟೇ ಬಾಕಿ ಎಂದು ಸುದ್ದಿ ಹರಿದಾಡಿತು. ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆದಿಯಾಗಿ ಅನೇಕ ಗಣ್ಯರು ಸುದೀಪ್ ಅವರನ್ನು ಭೇಟಿ ಮಾಡಿದ್ದರು. ಆದರೂ, ಸುದೀಪ್ ಯಾರ ಕೈಗೂ ಸಿಗಲಿಲ್ಲ.

ಡಿ.ಕೆ. ಶಿವಕುಮಾರ್ ಭೇಟಿಯ ಹಿಂದೆ ಯಾವ ಉದ್ದೇಶ ಇರಬಹುದು ಎಂದು ಸುದೀಪ್ ಆಪ್ತರಲ್ಲಿ ವಿಚಾರಿಸಿದಾಗ, ಅದು ರಾಜಕೀಯ ಭೇಟಿ ಅಲ್ಲ ಎಂದು ಗೊತ್ತಾಗಿದೆ.

ಡಿಕೆಶಿ ಒಡೆತನದ ಲೂಲೂ ಲೂಲೂ ಮಾಲ್ ನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆಗೆ ಸುದೀಪ್ ಅವರನ್ನು ಆಹ್ವಾನಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಡಿಕೆಶಿಗೆ ನಲಪಾಡ್ ಕೂಡ ಜೊತೆಯಾಗಿದ್ದರು.

Share This Article
Leave a comment