ನಿರ್ದೇಶಕ ಕೆ . ವಿಶ್ವನಾಥ್ ಇನ್ನಿಲ್ಲ

WhatsApp Image 2023 02 03 at 8.52.56 AM

ಹೈದರಾಬಾದ್‌: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮತ್ತು ಚಲನಚಿತ್ರ ನಿರ್ದೇಶಕ ಕಾಸಿನಾಧುನಿ ವಿಶ್ವನಾಥ್ (92) ಗುರುವಾರ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು ಮತ್ತು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು.

‘ಕಲಾತಪಸ್ವಿ’ ಎಂದೇ ಖ್ಯಾತರಾಗಿರುವ ವಿಶ್ವನಾಥ್ ಫೆಬ್ರವರಿ 1930ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು.ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ಪ್ರಮುಖ ಹೆಸರು ಸಂಪಾದಿಸಿದ್ದು, ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ 48 ನೇ ಪುರಸ್ಕೃತರಾಗಿದ್ದಾರೆ. ಗ್ರಾ ಪಂ ಚುನಾವಣೆ: ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಧ್ವನಿ ಕಲಾವಿದರಾಗಿ ತಮ್ಮ ಪಯಣ ಆರಂಭಿಸಿದ ವಿಶ್ವನಾಥ್ ‘ಶಂಕರಾಭರಣಂ’, ‘ಸಾಗರ ಸಂಗಮಂ’, ‘ಸ್ವಾತಿ ಮುತ್ಯಂ’, ‘ಸಪ್ತಪದಿ’, ‘ಕಾಮ್ಚೋರ್’, ‘ಸಂಜೋಗ್’ ಮತ್ತು ‘ಜಗ್ ಉತ್ಥಾ ಇನ್ಸಾನ್’ ಮುಂತಾದ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಚಿತ್ರಗಳಲ್ಲಿ ನಟನಾಗಿಯೂ ಚಿತ್ರಕಥೆಗಾರರಾಗಿಯೂ ಛಾಪು ಮೂಡಿಸಿದ್ದರು.

Leave a comment

Leave a Reply

Your email address will not be published. Required fields are marked *

error: Content is protected !!