ಮಂಡ್ಯದಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆಗೆ ನಟ ಧನಂಜಯ ಚಾಲನೆ

Team Newsnap
1 Min Read
Actor Dhananjaya drives bachelor padayatra in Mandya ಮಂಡ್ಯದಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆಗೆ ನಟ ಧನಂಜಯ ಚಾಲನೆ

ವಯಸ್ಸು ಮೀರುತ್ತಿರುವ ರೈತರ ಮಕ್ಕಳಿಗೆ ವಿವಾಹವಾಗಲು ಹುಡುಗಿ ಸಿಗುತ್ತಿವೆಂದು ಬ್ರಹ್ಮಚಾರಿಗಳ ತಂಡವೊಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ.

ಮಂಡ್ಯದ ಕೆ ಎಂ ದೊಡ್ಡಿಯಲ್ಲಿ ಮಾದಪ್ಪನ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆಗೆ ನಟ ಡಾಲಿ ಚಾಲನೆ ನೀಡಿದರು.ಕ್ಷಮೆ ಕೇಳಿ : ಇಲ್ಲದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

ರೈತರ ಮಕ್ಕಳಿಗೆ ಯಾರು ಹೆಣ್ಣು ಕೊಡುತ್ತಿಲ್ಲ. ಇದರಿಂದ ನೊಂದ ಯುವಕರು ವಧು ಸಿಗಲಿ ಎಂದು ಪ್ರಾರ್ಥನೆ ಮಾಡಿ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಹೊರಟಿದ್ದಾರೆ.

ಕೆ.ಎಂ ದೊಡ್ಡಿಯ ವೆಂಕಟೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿದ ಬ್ರಹ್ಮಚಾರಿ ಯುವಕರ ಗುಂಪು ಸೇರಿಕೊಂಡು ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಹೆಜ್ಜೆ ಹಾಕಿದರು

ಅವಿವಾಹಿತರ ಯುವಕರ ಪಾದಾಯಾತ್ರೆ ನಟ ಡಾಲಿ ಚಾಲನೆ ನೀಡಿ ಸ್ವಲ್ಪ ದೂರ ಪಾದಯಾತ್ರಿಗಳೊಂದಿಗೆ ನಟ ಧನಂಜಯ ಹೆಜ್ಜೆ ಹಾಕಿದ್ದಾರೆ.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾಲಿ, ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಗಳಲ್ಲಿ ಪಾದಯಾತ್ರೆ ವಿಚಾರ ನೋಡಿದಾಗ ತಮಾಷೆ ಅನಿಸ್ತು. ಪಾದಯಾತ್ರೆ ಯಾಕೆ ಹೊಟಿದ್ದೀರಿ ಅಂತ ಕೇಳಿದಾಗ ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ ಎಂದರು.

ಇದು ನಿಜಕ್ಕೂ ಗಂಭೀರವಾದ ವಿಚಾರವಾಗಿದೆ. ನಾನು ಕೂಡ ಹಳ್ಳಿಯಿಂದಲೇ ಬಂದಿರೋದು. ಹಳ್ಳಿಗಳಿಗೆ ಹೋದಾಗಲೆಲ್ಲ ಯುವಕರನ್ನು ಮಾತನಾಡಿಸಿದಾಗ ಹೆಣ್ಣು ಸಿಕ್ತಿಲ್ಲ ಅಂತ ಹೇಳುತ್ತಾರೆ. ಇತ್ತೀಚೆಗೆ ಆದಿಚುಂಚನಗಿರಿಯಲ್ಲಿ ವಧು-ವರರ ನೋಂದಣಿಯಲ್ಲಿ ಪಾಲ್ಗೊಂಡಿದ್ದ ಯುವಕರ ಸಂಖ್ಯೆ ನೋಡಿದರೆ ಲಿಂಗಾನುಪಾತ ಗೊತ್ತಾಗುತ್ತೆ. ನಾವು ಚಿಕ್ಕವನಿದ್ದಾಗನಿಂದಲೂ ಗಂಡು ಮಕ್ಕಳೇ ಬೇಕು ಅಂತಿದ್ದರು. ಹೆಣ್ಣು ಮಕ್ಕಳು ಹುಟ್ಟಿದ್ರೆ ತಾತ್ಸಾರದಿಂದ ನೋಡ್ತಿದ್ದರುಅದರ ರಿಸಲ್ಟ್ ಈಗ ಗೊತ್ತಾಗುತ್ತಿದೆ. ಹೆಣ್ಣು-ಗಂಡಿನ ನಡುವೆ ಲಿಂಗಾನುಪಾತ ಏರುಪೇರಾಗಿದೆ. ಇದು ಕೇವಲ ಪಾದಯಾತ್ರೆ ಮಾತ್ರ ಅಲ್ಲ ಜಾಗೃತಿ ಕಾರ್ಯಕ್ರಮವಾಗಿದೆ. ಪಾದಯಾತ್ರೆ ಹೊರಟಿರುವವರು ಮುಂದಿನ ವರ್ಷ ಮದುವೆಯಾಗಿ ಬೆಟ್ಟಕ್ಕೆ ಹೋಗಲಿ ಅಂತ ಶುಭ ಹಾರೈಸಿದ್ದಾರೆ. ಈ ವೇಳೆ ನಟ ನಾಗಭೂಷಣ ಸಾಥ್ ನೀಡಿದ್ದಾರೆ.

ಈ ಪಾದಯಾತ್ರೆಗೆ 3 ಷರತ್ತು

  • 1) ಕಡ್ಡಾಯವಾಗಿ 30 ವರ್ಷ ದಾಟಿರಬೇಕು.
  • 2 ) ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ.
  • 3) ನಿಶ್ಚಿತಾರ್ಥ ಆದವರೂ ಪಾದಯಾತ್ರೆಗೆ ಬರುವಂತಿಲ್ಲ.
Share This Article
Leave a comment