ಕ್ಷಮೆ ಕೇಳಿ : ಇಲ್ಲದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

Team Newsnap
1 Min Read
Apologize : Otherwise 1 Crore Rs. Defamation case – Rohini warns Roopa ಕ್ಷಮೆ ಕೇಳಿ : ಇಲ್ಲದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ – ರೂಪಾಗೆ ರೋಹಿಣಿ ಎಚ್ಚರಿಕೆ

ರೋಹಿಣಿ ಸಿಂಧೂರಿ –
ಡಿ ರೂಪಾ ಒಬ್ಬರ ಮೇಲೋಬ್ಬರು ಯುದ್ಧ ತಾರಕಕ್ಕೇರಿದೆ . ಅದು ಈಗ ಕಾನೂನಿನ ಅಂಗಳಕ್ಕೂ ಬಂದಿದೆ ರೂಪಾ ಐಪಿಎಸ್ ಅಧಿಕಾರಿ ಯಾಗಿ ಮಹಿಳೆಯ ಗೌರವಕ್ಕೆ ಧಕ್ಕೆಯಾಗುವಂತೆ ವೈಯಕ್ತಿಕ ಫೋಟೋಗಳನ್ನು ಫೇಸ್‍ಬುಕ್ ಅಲ್ಲಿ ಹಾಕಿದ್ದಾರೆ. ಅವರ ವಿರುದ್ಧ ನಿರ್ಬಂಧಾಜ್ಞೆಯನ್ನು ಹೇರಬೇಕು ಎಂದು ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅಲ್ಲದೇ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೂಪಾಗೆ ಹಿರಿಯ ವಕೀಲರ ಮೂಲಕ ನೋಟಿಸ್ ನೀಡಲಾಗಿದೆ. 24 ಗಂಟೆಯ ಒಳಗಡೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು.ಮಂಡ್ಯ, ವರುಣಾ – ಶಿಕಾರಿಪುರ ಅಂತಾ ಏನೂ ಇಲ್ಲ: ವಿಜಯೇಂದ್ರ

ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಮಾಡಿರುವ ಮಾನಹಾನಿ ಆರೋಪಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಕೋರ್ಟ್‍ನಲ್ಲಿ 1 ಕೋಟಿ ರೂ. ಮಾನನಷ್ಟ ಕೇಸ್ ಹೂಡುವುದಾಗಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ

ರೂಪಾ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡ ದೂರು ನೀಡಿದ್ದರೂ, ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ

ರೂಪಾ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಸೈಬರ್ ಸೆಲ್‍ನ ಮುಖ್ಯಸ್ಥರು ಆಗಿದ್ದರು. ಆ ಸಂದರ್ಭದಲ್ಲಿ ರೋಹಿಣಿಯವರ ಫೋಟೋ ಕಳವು ಮಾಡಿರಬಹುದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದ್ದಾರೆ.

Share This Article
Leave a comment