ಎಂಜಿನಿಯರಿಂಗ್ ಸೀಟು ಬ್ಲಾಕಿಂಗ್ ತಡೆಗೆ ಕ್ರಮ: ಡಾ. ಅಶ್ವತ್ಥನಾರಾಯಣ

Team Newsnap
1 Min Read
Sri Ram Deva Betta Project can't be stopped: Minister Ashwath Narayan ಶ್ರೀರಾಮ ದೇವರ ಬೆಟ್ಟ ಯೋಜನೆ ತಡೆಯಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್‌ ನಾರಾಯಣ್

ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣದ ಸೀಟುಗಳ ಹಂಚಿಕೆ ಮುಗಿದ ನಂತರವೇ ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಸೀಟು ಬ್ಲಾಕಿಂಗ್ ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದರು.


ಸಚಿವರು ಬೆಂಗಳೂರಿನಲ್ಲಿ ಬುಧವಾರ ವರದಿಗಾರರೊಂದಿಗೆ ಮಾತನಾಡಿದರು. ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಅಡಳಿತ ಮಂಡಳಿಗಳು ಶೇ. ೩೦ರಷ್ಟು ಶುಲ್ಕ ಹೆಚ್ಚಳದ ಬೇಡಿಕೆ ಇಟ್ಟಿದ್ದವು. ಆದರೆ ಇದಕ್ಕೆ ರಾಜ್ಯ ಸರ್ಕಾರ ಸಮ್ಮಿತಿಸಿಲ್ಲ. ಪ್ರವೇಶ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಲೇಜು ಆಡಳಿತ ಮಂಡಳಿಗಳು ಇತರ ಶುಲ್ಕದ ಹೆಸರಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆಯುವಂತಿಲ್ಲ. ಇತರೆ ಶುಲ್ಕ ೨೦,೦೦೦ ಸಾವಿರರೂ. ಮೀರುವಂತಿಲ್ಲ. ಇತರ ಶುಲ್ಕದ ವಿವರಗಳನ್ನು ಎಲ್ಲ ಕಾಲೇಜುಗಳು ಕಡ್ಡಾಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಬೇಕು. ಪ್ರಾಧಿಕಾರದ ಮೂಲಕವೇ ಇತರ ಶುಲ್ಕ ನೀಡಬೇಕು. ನಂತರ ಇದನ್ನು ಸಂಬಂಧಿಸಿದ ಕಾಲೇಜುಗಳಿಗೆ ವರ್ಗ ಮಾಡಲಾಗುತ್ತೆ ಎಂದು ಉನ್ನತ ಶಿಕ್ಷಣ ಸಚಿವರು ವಿವರಿಸಿದರು.


ಹಾಸ್ಟೆಲ್ ಹಾಗೂ ವಾಹನ ಸೌಲಭ್ಯದ ಶುಲ್ಕವನ್ನು ಮಾತ್ರ ಕಾಲೇಜುಗಳು ನೇರವಾಗಿ ಪಡೆಯಬಹುದು. ಅತ್ಯಾಧುನಿಕ ಪ್ರಯೋಗಾಲಯ, ವಿಶೇಷ ಕೋರ್ಸ್ ಸೌಲಭ್ಯವಿದ್ದಲ್ಲಿ ಈ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೂಲಕ ಮೌಲ್ಯಮಾಪನ ನಡೆಸಿ ಶುಲ್ಕ ನಿಗದಿಪಡಿಸಬೇಕು. ಅದನ್ನೂ ಪ್ರಾಧಿಕಾರದ ಮೂಲಕವೇ ಪಡೆಯಬೇಕು ಎಂದೂ ಡಾ. ಅಶ್ವತ್ಥನಾರಾಯಣ ಹೇಳಿದರು.


ಇದಕ್ಕೂ ಮುನ್ನ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಹಾಗೂ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳ ಜತೆ ಸಚಿವರು ಸಭೆ ನಡೆಸಿದರು.

Share This Article
Leave a comment