ಮನೆ ನಿರ್ಮಾಣ ಲೈಸೆನ್ಸ್ ಗೆ ​ ಲಂಚ: ಬಳ್ಳಾರಿ ಪಿಡಿಒ, ತಾಪಂ ಮಾಜಿ ಸದಸ್ಯೆಯ ಪತಿ ಎಸಿಬಿ ಬಲೆಗೆ

Team Newsnap
2 Min Read

ಮನೆ‌ ನಿರ್ಮಾಣಕ್ಕಾಗಿ ಲೈಸೆನ್ಸ್​ ನೀಡಲು 80 ಸಾವಿರ ರು ಲಂಚ ಕೇಳಿರುವ ಬಳ್ಳಾರಿ ತಾಲೂಕಿನ ಶ್ರೀಧರ್‌ ಗಡ್ಡೆ ಗ್ರಾ‌.ಪಂ. ಪಿಡಿಒ ಹಾಗೂ ತಾಪಂ ಮಾಜಿ ಸದಸ್ಯೆ ಪತಿಯೂ ಸಹ ಎಸಿಬಿ ಬಲೆಗೆ ಬಿದ್ದಿದ್ದಾರೆ

ಪಿಡಿಒ ಸಿದ್ದಲಿಂಗಪ್ಪ ಜೊತೆ ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ಬಳ್ಳಾರಿಯ‌ ಗುಡಾರ್ ನಗರದ ಮಾಜಿ‌ ತಾ.ಪಂ ಸದಸ್ಯೆ ಮಹಾಲಕ್ಷ್ಮಿ ಪತಿ ಜಂಬಣ್ಣ ಕೂಡ ಬಲೆಗೆ ಬಿದ್ದಿದ್ದಾರೆ. ಇದನ್ನು ಓದಿ – ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಘೋಷಣೆ

ನಾಗಾರ್ಜುನ್ ಎನ್ನುವವರ ಮನೆ‌ ನಿರ್ಮಾಣಕ್ಕೆ ಪರವಾನಗಿ ನೀಡಲು ಸಿದ್ದಲಿಂಗಪ್ಪ 80 ಸಾವಿರ ಲಂಚ ಕೇಳಿದ್ದರು. ಜಂಬಣ್ಣ ಮೂಲಕ ಡೀಲ್ ಮಾಡಲಾಗಿತ್ತು. ಈ ಬಗ್ಗೆ ನಾಗಾರ್ಜುನ್ ಅವರು ಎಸಿಬಿಗೆ ದೂರು ದಾಖಲು ಮಾಡಿದ್ದರು. ಇದನ್ನು ಓದಿ – ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಮಂಡ್ಯ ಶಾಸಕ ಎಂ ಶ್ರೀನಿವಾಸ್

ಮೊದಲೇ ಯೋಜನೆ ರೂಪಿಸಿರುವಂತೆ ಲಂಚ ಪಡೆಯುವ ವೇಳೆ ಎಸಿಬಿ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸಿದೆ. ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.

ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಘೋಷಣೆ

ಜು 18 ರಂದು ನಡಲಿರುವ
ರಾಷ್ಟ್ರಪತಿ ಸ್ಥಾನದ ಚುನಾವಣೆಗಾಗಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಆಯ್ಕೆಯಾಗಿದ್ದಾರೆ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಸೇರಿದಂತೆ ಮೂವರು ಸಂಭಾವ್ಯರ ಹೆಸರು ಕೇಳಿ ಬಂದಿತ್ತು.

ಅಂತಿಮವಾಗಿ ಇದೀಗ ವಿರೋಧ ಪಕ್ಷದ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

ಭಾರತೀಯ ಜನತಾ ಪಕ್ಷ ಇಂದು ತನ್ನ ಸಂಸದೀಯ ಮಂಡಳಿ ಸಭೆಯನ್ನು ನಡೆಸಲಿದೆ, ಅಲ್ಲಿ ಅದು ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಬಿಜೆಪಿ ಆಡಳಿತದಲ್ಲಿ ಸಚಿವರಾಗಿದ್ದ ಮಾಜಿ ಅಧಿಕಾರಿ ಯಶವಂತ್ ಸಿನ್ಹಾ ಅವರು ಕಳೆದ ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಜುಲೈ 18 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಅವರ ಸಂಭಾವ್ಯ ಉಮೇದುವಾರಿಕೆಯ ಬಗ್ಗೆ ಇಂದು ಬೆಳಿಗ್ಗೆ ಅವರು ತೃಣಮೂಲದಿಂದ ದೂರ ಸರಿಯುತ್ತಿರೋದಾಗಿ ಟ್ವಿಟ್ ನಲ್ಲಿ ತಿಳಿಸಿದ್ದರು.\

ಲೈಸೆನ್ಸ್ ಲೈಸೆನ್ಸ್

Share This Article
Leave a comment