ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಘೋಷಣೆ

Team Newsnap
1 Min Read

ಜು 18 ರಂದು ನಡಲಿರುವ ರಾಷ್ಟ್ರಪತಿ ಸ್ಥಾನದ ಚುನಾವಣೆಗಾಗಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಆಯ್ಕೆಯಾಗಿದ್ದಾರೆ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಮಹಾತ್ಮಾ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಸೇರಿದಂತೆ ಮೂವರು ಸಂಭಾವ್ಯರ ಹೆಸರು ಕೇಳಿ ಬಂದಿತ್ತು.

ಅಂತಿಮವಾಗಿ ಇದೀಗ ವಿರೋಧ ಪಕ್ಷದ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಇದನ್ನು ಓದಿ – ಗೋವಾದಲ್ಲಿ ಅವಘಡ : ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು : ಬೆಂಗಳೂರಿಗೆ ಏರ್ ಲಿಪ್ಟ್

ಭಾರತೀಯ ಜನತಾ ಪಕ್ಷ ಇಂದು ತನ್ನ ಸಂಸದೀಯ ಮಂಡಳಿ ಸಭೆಯನ್ನು ನಡೆಸಲಿದೆ, ಅಲ್ಲಿ ಅದು ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದನ್ನು ಓದಿ – 7.5 ಸಾವಿರ ಲಂಚ ಸ್ವೀಕರಿಸಿದ ಚಾಮರಾಜನಗರ PWD ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ACB ಬಲೆಗೆ

ಬಿಜೆಪಿ ಆಡಳಿತದಲ್ಲಿ ಸಚಿವರಾಗಿದ್ದ ಮಾಜಿ ಅಧಿಕಾರಿ ಯಶವಂತ್ ಸಿನ್ಹಾ ಅವರು ಕಳೆದ ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಜುಲೈ 18 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಅವರ ಸಂಭಾವ್ಯ ಉಮೇದುವಾರಿಕೆಯ ಬಗ್ಗೆ ಇಂದು ಬೆಳಿಗ್ಗೆ ಅವರು ತೃಣಮೂಲದಿಂದ ದೂರ ಸರಿಯುತ್ತಿರೋದಾಗಿ ಟ್ವಿಟ್ ನಲ್ಲಿ ತಿಳಿಸಿದ್ದರು.

Share This Article
Leave a comment