ಈ ಬಾರಿ ಎಸಿಬಿ ಅಧಿಕಾರಿಗಳು ಸಕಾ೯ರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ಮಾಡದೇ BDA ಅಧಿಕಾರಿಗಳ ಮಧ್ಯವತಿ೯ಗಳ ನಿವಾಸದ ಮೇಲೆ ಮಂಗಳವಾರ ಬೆಂಗಳೂರಿನ 9 ಕಡೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಎಸ್.ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 100 ಮಂದಿ ಅಧಿಕಾರಿಗಳಿಂದ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಬಿಡಿಎ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಮಧ್ಯವರ್ತಿಗಳ ನಿವಾಸದ ಮೇಲೆ ಈ ದಾಳಿ ನಡೆದಿದೆ
ಬಿಡಿಎ ಕಚೇರಿಯಲ್ಲಿ ಇರಬೇಕಾದ ಫೈಲುಗಳನ್ನೇ ಹೊರಗೆ ತಂದು ಬ್ರೋಕರ್ ಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಹಿಂದೆ ದಾಳಿ ನಡೆಸಿದಾಗ ಎಸಿಬಿ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಲಭ್ಯವಾಗಿತ್ತು. ಅನೇಕ ಬ್ರೋಕರ್ ಗಳ ಮನೆಯಲ್ಲಿ ಬಿಡಿಎ ಸಂಬಂಧಿತ ಫೈಲುಗಳು ಇರುವ ಸಾಧ್ಯತೆ ಹಿನ್ನಲೆ, ಏಕಾ ಕಾಲಕ್ಕೆ 9 ಮಂದಿ ಮಧ್ಯವರ್ತಿಗಳ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂಬ ಎನ್ನಲಾಗಿದೆ.
ನಗರದ ಚಾಮರಾಜಪೇಟೆ, ದೊಮ್ಮಲೂರು, ಆರ್ಟಿ ನಗರ, ಮಲ್ಲತ್ತಹಳ್ಳಿಗಳಲ್ಲಿ ಈ ದಾಳಿಗಳನ್ನು ಮಾಡಲಾಗಿದೆ. ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದಾರೆ.
More Stories
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ
ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ