ಕಾರ್ಮಿಕ ಇಲಾಖೆ ಉಪ ಆಯುಕ್ತ ಎ.ಹೆಚ್.ಉಮೇಶ್ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರು ಮತ್ತು ಅವರ ಹೂಟ್ಟೂರು ಮತ್ತು ಆಪ್ತರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿರುವ ವಸ್ತು ಮತ್ತು ನಗದಿನ ಬಗ್ಗೆ ಮಾಹಿತಿ ಬರಬೇಕಿದೆ
ಉಮೇಶ್ ಅವರ ಹುಟ್ಟೂರಾದ ರಾಮನಗರದ ಆವರಗೆರೆಯಲ್ಲಿರುವ ಮನೆ ಮೇಲೂ ದಾಳಿ ಮಾಡಲಾಗಿದೆ.
ಈಗ ಯಶವಂತಪುರ ಉಪ ವಿಭಾಗದ ಉಪ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತನ್ನ ಕುಟುಂಬಸ್ಥರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿರುವ ಆರೋಪ ಉಮೇಶ್ ಮೇಲಿದೆ.
ರವಿ ಕುಮಾರ್ ಕಂಚನಹಳ್ಳಿ ದೂರಿನ ಮೇರೆ ಎಫ್ಐಆರ್ ಆಗಿತ್ತು.
ರಾಮನಗರ ಎಸಿಬಿ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ ಆಧರಿಸಿ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
More Stories
ಅರಣ್ಯ ಪ್ರದೇಶದಲ್ಲಿ ಪಾರ್ಟಿ – ಪ್ರಶ್ನಿಸಿದ ಪೊಲೀಸರ ಮೇಲೆಯೇ ರೌಡಿಶೀಟರ್ಗಳ ಹಲ್ಲೆ
ರಾಮನಗರ: ಹಾಸ್ಟೆಲ್ನಲ್ಲೇ ನರ್ಸಿಂಗ್ ವಿದ್ಯಾರ್ಥಿನಿಯ ಆತ್ಮಹತ್ಯೆ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು