ಹಾಸನಾಂಬ ದೇವಿ ದರ್ಶನಕ್ಕೆ ಎಲ್ಲರಿಗೂ ಅವಕಾಶ – ಎರಡು ಡೋಸ್ ಲಸಿಕೆ ಕಡ್ಡಾಯ: ಗೋಪಾಲಯ್ಯ

Team Newsnap
1 Min Read

ಹಾಸನದ ಇತಿಹಾಸ ಪ್ರಸಿದ್ದ ಹಾಸನಾಂಬ ದೇವಿಯ ದರ್ಶನಕ್ಕೆ ಅಕ್ಟೋಬರ್ 28 ರಿಂದ, ಸಾರ್ವಜನಿಕರಿಗೆ ಅವಕಾಶ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಗೋಪಾಲಯ್ಯ ರಾಜ್ಯದಲ್ಲಿ ದಸರಾ ನಡೆದಿದೆ, ಶಾಲೆಗಳು ಆರಂಭವಾಗಿವೆ. ಹೀಗಾಗಿ ಮೊದಲ ದಿನ, ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ ಏಳು ದಿನಗಳು ಸಾರ್ವಜನಿಕರು ದೇವಿ ದರ್ಶನ ಮಾಡಲು ಅವಕಾಶವಿದೆ ಎಂದಿದ್ದಾರೆ.

ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆಧಾರ್ ಕಾರ್ಡ್, ಐಡಿ ಕಾರ್ಡ್ ತರಬೇಕು ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ಇದೆ ಎಂದಿದ್ದಾರೆ.

ಬಿಜೆಪಿಗೆ ಹೋಗಿ ಅಂತ ಹೇಳಿದ್ದೇ ಜಮೀರ್ :

gopl jamir

ಕಾಂಗ್ರೆಸ್​ ಶಾಸಕ ಜಮೀರ್ ಅಹಮ್ಮದ್ ಅವರಿಗೆ ಕಾಂಗ್ರೆಸ್ ಸರ್ಕಾರ ಇರೋದು ಇಷ್ಟ ಇರಲಿಲ್ಲ. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆದಾಗುತ್ತೆ ನನ್ನನ್ನು ಬಿಜೆಪಿಗೆ ಹೋಗು ಅಂದ್ರು ಅಂತ ಸಚಿವ ಗೋಪಾಲಯ್ಯ ಹೊಸ ಬಾಂಬ್​ ಸಿಡಿಸಿದ್ದಾರೆ.

ನಾನು, ಜಮೀರ್ ಒಳ್ಳೆ ಸ್ನೇಹಿತರು. ನಾನು ಬಿಜೆಪಿಯಲ್ಲೇ ಇರ್ತಿನಿ, ನನ್ನ ಮಕ್ಕಳಿಗೂ ಇದೇ ಮಾತು ಹೇಳುತ್ತೆನೆ. ನಾನು ಇಲ್ಲಿ ಸಚಿವನಾಗಿದ್ದೇನೆ, ಬಿಜೆಪಿ ಪಕ್ಷ ನನಗೆ ಎಲ್ಲಾ ಕೊಟ್ಟಿದೆ.ಜಮೀರ್ ಬಿಜೆಪಿಗೆ ಬರ್ತಾರಾ? ಎಂಬ ಪ್ರಶ್ನೆಗೆ, ಇದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಸಚಿವರು ಚುಟುಕಾಗಿ ಹೇಳಿದರು.

Share This Article
Leave a comment