ಲಂಚ ಪಡೆದ ಆರೋಪದಲ್ಲಿ ಬಂಧನಕ್ಕೊಳಗಾಗಿ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ ಅವರ ಪ್ಲ್ಯಾಟ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ದಾಳಿ ವೇಳೆ 30 ಎಕರೆ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿವೆ. ಎಸಿಬಿ ಡಿವೈಎಸ್ ಪಿ ಬಸವರಾಜ್ ಮುಗ್ಧಂ ನೇತೃತ್ವದಲ್ಲಿ ನಡೆದ ಈ ದಾಳಿ ವೇಳೆ ಬೆಂಗಳೂರು-ಬೆಂಗಳೂರು ಗ್ರಾಮಾಂತರ ಭಾಗದಲ್ಲೇ 30 ಎಕರೆ ಜಾಗ ಹೊಂದಿರುವುದು ಪತ್ತೆಯಾಗಿದೆ.ಇದನ್ನು ಓದಿ -ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ
ಸಂಬಂಧಿಕರ ಹೆಸರಿನಲ್ಲೂ ಕೋಟಿ ಕೋಟಿ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಮಂಜುನಾಥ್ ಅವರ ಬ್ಯಾಂಕ್ ಖಾತೆಗಳ ವಿವರಗಳನ್ನೂ ಪಡೆಯುತ್ತಿದ್ದಾರೆ.
ಮಂಜುನಾಥ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸಿರುವ ಹಣದ ವಿವರ ಪಡೆಯುತ್ತಿದ್ಧಾರೆ. ಇತರೆ ಆಸ್ತಿಪತ್ರದ ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. 12 ಬ್ಯಾಂಕ್ ಖಾತೆಗಳ ವಿವರಗಳನ್ನು ಕೂಡ ಪಡೆಯಲಾಗಿದೆ.
ಮಂಜುನಾಥ್ ಎಷ್ಟು ಬಾರಿ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಕೂಡ ಕಲೆಹಾಕಲಾಗಿದೆ. ಬೇನಾಮಿ ಪ್ರಾಪರ್ಟಿಗಳ ಬಗೆಗೂ ಎಸಿಬಿ ಮಾಹಿತಿ ಕಲೆಹಾಕಿದೆ.
- ಬಿಜೆಪಿ ಎಂಎಲ್ಸಿ ವಿಶ್ವನಾಥ್ ಪುತ್ರ ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ
- ಧಾರವಾಡದಲ್ಲಿ ನಕಲಿ ನೋಟು ಚಲಾವಣೆ: ಬಿಜೆಪಿ ಮುಖಂಡ ಸೇರಿ ಮೂವರು ಬಂಧನ
- ಏಷ್ಯಾಕಪ್ – ಬಲಿಷ್ಠ ಟೀಮ್ ಇಂಡಿಯಾ ತಂಡ ಪ್ರಕಟ
- ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶವೇ ಇಲ್ಲ: ಜಮೀರ್ ಅಹ್ಮದ್ ಖಾನ್
- ಚಿನ್ನ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು; ಇತಿಹಾಸ ನಿರ್ಮಿಸಿದ ಆಟಗಾರ್ತಿ!
- ಮಗಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಂತವೈದ್ಯೆ – ಸಾವಿಗೆ ಹಲವು ಅನುಮಾನ
More Stories
ಬಿಜೆಪಿ ಎಂಎಲ್ಸಿ ವಿಶ್ವನಾಥ್ ಪುತ್ರ ಕಾಂಗ್ರೆಸ್ ಸೇರ್ಪಡೆಗೆ ಸಿದ್ದತೆ
ಧಾರವಾಡದಲ್ಲಿ ನಕಲಿ ನೋಟು ಚಲಾವಣೆ: ಬಿಜೆಪಿ ಮುಖಂಡ ಸೇರಿ ಮೂವರು ಬಂಧನ
ಏಷ್ಯಾಕಪ್ – ಬಲಿಷ್ಠ ಟೀಮ್ ಇಂಡಿಯಾ ತಂಡ ಪ್ರಕಟ