ಈ ದಾಳಿ ವೇಳೆ 30 ಎಕರೆ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿವೆ. ಎಸಿಬಿ ಡಿವೈಎಸ್ ಪಿ ಬಸವರಾಜ್ ಮುಗ್ಧಂ ನೇತೃತ್ವದಲ್ಲಿ ನಡೆದ ಈ ದಾಳಿ ವೇಳೆ ಬೆಂಗಳೂರು-ಬೆಂಗಳೂರು ಗ್ರಾಮಾಂತರ ಭಾಗದಲ್ಲೇ 30 ಎಕರೆ ಜಾಗ ಹೊಂದಿರುವುದು ಪತ್ತೆಯಾಗಿದೆ.ಇದನ್ನು ಓದಿ -ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ
ಸಂಬಂಧಿಕರ ಹೆಸರಿನಲ್ಲೂ ಕೋಟಿ ಕೋಟಿ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಮಂಜುನಾಥ್ ಅವರ ಬ್ಯಾಂಕ್ ಖಾತೆಗಳ ವಿವರಗಳನ್ನೂ ಪಡೆಯುತ್ತಿದ್ದಾರೆ.
ಮಂಜುನಾಥ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯಿಸಿರುವ ಹಣದ ವಿವರ ಪಡೆಯುತ್ತಿದ್ಧಾರೆ. ಇತರೆ ಆಸ್ತಿಪತ್ರದ ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. 12 ಬ್ಯಾಂಕ್ ಖಾತೆಗಳ ವಿವರಗಳನ್ನು ಕೂಡ ಪಡೆಯಲಾಗಿದೆ.
ಮಂಜುನಾಥ್ ಎಷ್ಟು ಬಾರಿ ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಕೂಡ ಕಲೆಹಾಕಲಾಗಿದೆ. ಬೇನಾಮಿ ಪ್ರಾಪರ್ಟಿಗಳ ಬಗೆಗೂ ಎಸಿಬಿ ಮಾಹಿತಿ ಕಲೆಹಾಕಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು