ಬಿಡಿಎ ನಂತರ ಬಿಬಿಎಂಪಿ ಟಾರ್ಗೆಟ್ ಮಾಡಿರುವ ಎಸಿಬಿ ಪಾಲಿಕೆಯ ಎಲ್ಲಾ ವಲಯಗಳಲ್ಲೂ ದಾಳಿ ನಡೆಸಿದೆ.
ಇಲಾಖೆಗಳಲ್ಲಿ ವ್ಯಾಪಕ ಗೋಲ್ ಮಾಲ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಈ ದಾಳಿ ವೇಳೆ ಅಕ್ರಮಗಳಿಗೆ ಸಂಬಂಧಿಸಿದ ಅನೇಕ ಕಡತಗಳು ಎಸಿಬಿ ವಶಕ್ಕೆ ಪಡೆದುಕೊಂಡಿದೆ.
ಬಿಬಿಎಂಪಿ (BBMP) ಕೇಂದ್ರ ಕಚೇರಿ ಸೇರಿದಂತೆ ಹನ್ನೊಂದು ಪ್ರಮುಖ ಕಚೇರಿಗಳಿಗೆ ಎಸಿಬಿ ಲಗ್ಗೆ ಇಟ್ಟಿದ್ದು, ಸಬ್ ಕಚೇರಿಗಳು ಸೇರಿದಂತೆ ಒಟ್ಟಾರೆ 27 ಕಡೆ ಏಕಕಾಲದಲ್ಲಿ ಎಸಿಬಿ ಕಾರ್ಯಾಚರಣೆ ನಡೆಸಿದೆ.
ಮಹದೇವಪುರ, ಬೊಮ್ಮನಹಳ್ಳಿ ಬಿಬಿಎಂಪಿ (BBMP) ಕಚೇರಿಯಲ್ಲಿ ಬೆಂಗಳೂರು ಎಸ್ ಪಿ ಯತೀಶ್ ಚಂದ್ರ ನೇತೃತ್ವದಲ್ಲಿ 200 ಮಂದಿಯಿಂದ ರೇಡ್ ಮಾಡಲಾಗಿದೆ.
ದಾಳಿ ಎಲ್ಲಿ ?
ಕೇಂದ್ರ ಕಚೇರಿ, ವಲಯ ಕಚೇರಿ ಹಾಗು ಜಂಟಿ ಆಯುಕ್ತರ ಕಚೇರಿ. ರೆವಿನ್ಯೂ ಕಚೇರಿ ನಗರ ಯೋಜನಾ ವಿಭಾಗ, ಜಾಹೀರಾತು ವಿಭಾಗ, ಟಿಡಿಆರ್ ವಿಭಾಗ. ಆರೋಗ್ಯ ವಿಭಾಗ, ರಸ್ತೆ ಮತ್ತು ಮೂಲಸೌಕರ್ಯ ವಿಭಾಗದಲ್ಲಿ ದಾಳಿ ನಡೆದಿದೆ.
ಮೂಲಂಗಿಯ (Radish) 10 ಉಪಯೋಗ: ಹಾಗೂ ಬಗೆ ಬಗೆಯ ಅಡುಗೆಗಳು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ, ಅಲ್ಲಿನ ಪರಿಸ್ಥಿತಿ ಘೋರವಾಗಿದೆ.
ವಾಯು ಸೇನೆಯ ದಾಳಿಯ ಜೋರಾದ ಸದ್ದು, ಭೀಕರ
ಸ್ಫೋಟಗಳು, ಮಿಸೈಲ್ಗಳ ದಾಳಿ ನಿರಂತರವಾಗಿ ನಡೆಯುತ್ತಲೇ ಇವೆ. ಉಕ್ರೇನ್ನ ನಾಗರಿಕರ ಪರಿಸ್ಥಿತಿ ಶೋಚನೀಯವಾಗಿದೆ
ಉಕ್ರೇನ್ ನಾಗರಿಕರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದು, ಮೆಟ್ರೋ ಸ್ಟೇಷನ್, ಬಾಂಬ್ ಶೆಲ್ಟರ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಷ್ಯಾ ಬಾಂಬ್ ದಾಳಿ ನಡೆಸಿದರೂ ಹಾನಿಯಾಗ ಬಾರದು ಎಂದು ಉಕ್ರೇನ್ ರಾಜಧಾನಿ ಕೀವ್ನಲ್ಲಿ ಸ್ಪೆಷಲ್ ಶೆಲ್ಟರ್ ನಿರ್ಮಾಣ ಮಾಡಲಾಗಿದೆ.
ಅಲ್ಲಿ ಸಾಕಷ್ಟು ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.
ಕೆಲವು ಗ್ರೌಂಡ್ ರಿಪೋರ್ಟ್ಗಳ ಪ್ರಕಾರ, ಪ್ರತಿ 20 ನಿಮಿಷಕ್ಕೆ ಒಂದರಂತೆ ಬಾಂಬ್ ದಾಳಿ ಮಾಡುತ್ತಿದೆ. ಇಂದು ಬೆಳಗ್ಗೆ ಒಂದು ಬಿಲ್ಡಿಂಗ್ ಅನ್ನ ನೆಲಸಮ ಮಾಡಿದೆ. ಬಾಂಬ್ ದಾಳಿಯಿಂದಾಗಿ ಅಲ್ಲಲ್ಲಿ ಬೆಂಕಿಯ ಚೆಂಡುಗಳು ಕಾಣಿಸಿಕೊಳ್ಳುತ್ತಿದೆ. 9 ಅಂತಸ್ತಿನ ಕಟ್ಟಡ ಒಂದರ ಮೇಲೆ ರಷ್ಯಾದ ವಿಮಾನವೊಂದು ಪತನಗೊಂಡಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು