ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಸಿಸಿಎಫ್ ಅಧಿಕಾರಿಯೊಬ್ಬರ ಮೇಲೆ ಮಹಿಳೆಯೊಬ್ಬಳು ಧಾರವಾಡದಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
ವಿದ್ಯಾ ಹಿರೇಮಠ ದೂರು ದಾಖಲಿಸಿದ ಮಹಿಳೆ. ಧಾರವಾಡದಲ್ಲಿ ಚಿಫ್ ಕನ್ಸರ್ವೆಟಿವ್ ಫಾರೆಸ್ಟರ್ ಆಗಿದ್ದ ರವಿ ಶಂಕರ ಅವರು ವಿದ್ಯಾ ಅವರಿಗೆ ಫೆಸ್ ಬುಕ್ ನಲ್ಲಿ ಪರಿಚಯವಾಗಿದ್ದರು.
ಸದ್ಯ ರವಿಶಂಕರ ಶಿವಮೊಗ್ಗದಲ್ಲಿ ಸಿಸಿಎಫ್ ಆಗಿದ್ದಾರೆ. ರವಿಶಂಕರ್ ಅವರು ಮದುವೆ ಮಾಡಿಕೊಳ್ಳುವುದಾಗಿ ವಿದ್ಯಾಳನ್ನು ನಂಬಿಸಿ ಮೋಸ ಮಾಡಿದ್ದರು.
ಮೋಸ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರವಿಶಂಕರ ಧಮ್ಕಿ ಹಾಕಿದ್ದಾರೆ ಎಂದು ರವಿ ಶಂಕರ್ ವಿರುದ್ಧ ಮಹಿಳೆ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಈ ಮೊದಲು ದೂರು ನೀಡಿದ್ದ ಅವರು, ನಂತರ ಅಲ್ಲಿಂದ ಧಾರವಾಡ ಉಪನಗರ ಠಾಣೆಗೆ ದೂರನ್ನು ವಗಾ೯ವಣೆ ಮಾಡಿಸಿಕೊಂಡಿದ್ದಾರೆ.
ಕಳೆದ 2019ರಲ್ಲಿ ಧಾರವಾಡಕ್ಕೆ ಮಹಿಳೆ ಬಂದಿದ್ದರು. ಆ ವೇಳೆ ಅವರನ್ನು ರವಿಶಂಕರ್ ತನ್ನ ಸರ್ಕಾರಿ ಬಂಗಲೆಗೆ ಕರೆದುಕೊಂಡು ಹೋಗಿದ್ದ. ಅಷ್ಟೇ ಅಲ್ಲದೇ ರವಿಶಂಕರ್ ಅಶ್ಲೀಲವಾಗಿ ವೀಡಿಯೋ ಕಾಲ್ ಹಾಗೂ ವಾಟ್ಸಪ್ ಚಾಟ್ ಮಾಡಿರುವುದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಮೋಸ ಮಾಡಿದ್ದಕ್ಕೆ ಒಂದು ಸಾರಿ ಆತ್ಮಹತ್ಯೆಗೆ ಯತ್ನಿಸಿ ಡೆತ್ ನೋಟ್ ಕೂಡಾ ಬರೆದಿದ್ದರು ಎಂದು ದೂರಿನಲ್ಲಿ ದಾಖಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ