ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ

Team Newsnap
1 Min Read
shock for Congress: High Court order to cancel ACB - Lokyukta gets power again

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಹೈಕೋರ್ಟ್ ಹಸಿರು ನಿಶಾನೆ ನೀಡಿದೆ.

ನ್ಯಾಯಮೂರ್ತಿ ಕೃಷ್ಣ .ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಈಗಾಗಲೇ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿದೆ ಈ ಹಂತದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ನಿರ್ದೇಶಿಸಲು ಸಾಧ್ಯವಿಲ್ಲ  ಹೀಗಾಗಿ ಒಕ್ಕಲಿಗರ ಸಂಘದ ಚುನಾವಣೆಗೆ ನಡೆಸಬಹುದು ಎಂದು ತೀರ್ಪು ನೀಡಿದೆ.

ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಅರ್ಜಿ ಸೇರಿ ಸಲ್ಲಿಕೆಯಾಗಿದ್ದ 4 ರಿಟ್​ಗಳನ್ನು ವಿಚಾರಣೆ ನಡೆಸಿದ ನ್ಯಾಯಪೀಠ ನಿಗದಿತ ವೇಳಾಪಟ್ಟಿ ಅನುಸಾರ ಚುನಾವಣೆ ನಡೆಯಬೇಕು.

11 ಕೋಟಿ ರು ಚುನಾವಣಾ ವೆಚ್ಚವನ್ನು ತಗ್ಗಿಸಲು ನಿರ್ದೇಶನ ನೀಡಲು ಹೈಕೋರ್ಟ್ ನಕಾರವೆತ್ತಿದೆ.ಇಂತಹ ವಿಚಾರದ ಬಗ್ಗೆ ಸಂಘದ ಪ್ರಾಜ್ಞರು ಹಾಗೂ ಹಿರಿಯರೇ ಗಮನಹರಿಸಬೇಕು. ಎಂದಿದೆ.

ಇನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಸದಸ್ಯರ ಸದಸ್ಯತ್ವ ಸೇರ್ಪಡೆಗೆ ಸೇರಿಸಲು ಹೈಕೋರ್ಟ್ ನಿರಾಕರಿಸಿದೆ.ಚುನಾವಣಾ ವೆಚ್ಚದ ಎಲ್ಲ ಲೆಕ್ಕಪತ್ರಗಳನ್ನು ಚುನಾವಣಾಧಿಕಾರಿ  ಹಾಗೂ ಸಂಘದ ಅಧಿಕಾರಿಗಳು ಕರಾರುವಕ್ಕಾಗಿ ದಾಖಲಿಸಬೇಕು. ಹೊಸದಾಗಿ ಅಸ್ತಿತ್ವಕ್ಕೆ ಬರುವ ಆಡಳಿತ ಮಂಡಳಿಯೇ ಇದನ್ನು ಪರಿಶೀಲಿಸಬೇಕು‌ ಒಂದು ವೇಳೆ ಏನಾದರೂ ಎಡವಟ್ಟು ಮಾಡಿದ್ರೆ ಗಂಭೀರ ಕ್ರಮ ಕೈಗೊಳ್ಳಲಾಗುತ್ತೆ ಎಂದು ಕೋರ್ಟ್​ ತಿಳಿಸಿದೆ.

2022ರ ಜನವರಿ 12 ರಂದು ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯಲಿದೆ.

Share This Article
Leave a comment