ಬಿಜೆಪಿ – ಜೆಡಿಎಸ್ ಮೈತ್ರಿ ಖಚಿತ: ನಾಳೆ ಅಂತಿಮ ನಿರ್ಧಾರ – 2023ರ ಚುನಾವಣೆಗೂ ಇದೇ ದಿಕ್ಸೂಚಿ ?

Team Newsnap
1 Min Read

ಡಿ 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಾಳೆ ಜೆಡಿಎಸ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಈ ಕುರಿತಂತೆ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಬಹಿರಂಗವಾಗಿ ಜೆಡಿಎಸ್ ಮೈತ್ರಿ ಬಗ್ಗೆ ಆಹ್ವಾನ ನೀಡಿರುವುದು ದಳ ಪತಿಗಳಿಗೆ ಬಲ ತಂದಿದೆ.

ರಾಜ್ಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುವ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದೆ.

ವಿಜಯಪುರದಲ್ಲಿ 890, ಗುಲ್ಬರ್ಗಾದಲ್ಲಿ ಸಾವಿರ ಚಿಲ್ಲರೆ ವೋಟ್ ಗಳಿವೆ. ಬೀದರ್ ನಲ್ಲಿ 490, ರಾಯಚೂರಿನಲ್ಲಿ 890 ಮತಗಳಿವೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

ಧಾರವಾಡ, ಗದಗ, ಹಾವೇರಿಯಲ್ಲಿ ವೋಟ್ ಗಳಿವೆ. ಅಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗಿಲ್ಲ. ಇಲ್ಲಿ ಕಾಂಗ್ರೆಸ್, ಬಿಜೆಪಿ ಅವರಿಗೆ ಹೆಚ್ಚಿನ ಮತಗಳಿವೆ. ಭಾನುವಾರ ಸಭೆ ನಡೆಸಿ ಧಾರವಾಡ, ಗದಗ ಹಾವೇರಿಯಲ್ಲಿ ಮತಗಳನ್ನು ಯಾರಿಗೆ ಕೊಡಬೇಕು ಎಂಬ ನಿಧಾ೯ರವನ್ನು ದಳಪತಿಗಳು ನಿರ್ಧಾರ ಮಾಡಲಿದ್ದಾರೆ.

ಈ ಬಾರಿ ಬಿಜೆಪಿಯೊಂದಿಗೆ ಚುನಾವಣೆ ಮೈತ್ರಿಯನ್ನು ಸ್ವತಃ ದೇವೇಗೌಡರೇ ಒಪ್ಪಿಕೊಳ್ಳುವ ಒಲವು ತೋರಿದ್ದಾರೆ. ಜೆಡಿಎಸ್ ನಾಯಕರನ್ನು ಸೆಳೆದುಕೊಂಡು ಪಕ್ಷವನ್ನು ದುಬ೯ಲಗೊಳಿಸುವ ಕಾಂಗ್ರೆಸ್ ನಾಯಕ ಸಿದ್ದು ಹಾಗೂ ಡಿಕೆಶಿಗೆ ತಿರುಗೇಟು ಕೊಡಲು ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ತಂತ್ರವನ್ನು ಅನುಸರಿಸುವ ಲೆಕ್ಕಾಚಾರ ಹಾಕಿದ್ದಾರೆ.

ಈ ಚುನಾವಣೆಯ ಮೈತ್ರಿ ಮುಂದಿನ ವಿಧಾನ ಸಭಾ ಚುನಾವಣೆಗೂ ಮುಂದುವರೆಯಬೇಕೆ ? ಬೇಡವೆ ಎಂಬ ಚಚೆ೯ಗಳು ಗಂಭೀರವಾಗಿ ಆರಂಭವಾಗಿವೆ. ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಸದಾ ಟೀಕಿಸುವ ಸಿದ್ದರಾಮಯ್ಯನವರಿಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ನೀಡಲು ದಳಪತಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

Share This Article
Leave a comment