February 20, 2026

Newsnap Kannada

The World at your finger tips!

yaksh

ಭೀಕರ ರಸ್ತೆ ಅಪಘಾತ; ಯಕ್ಷಗಾನ ಹಿರಿಯ ಕಲಾವಿದ ಸ್ಥಳದಲ್ಲೇ ಸಾವು

Spread the love

ಉಡುಪಿಯ ಮೂಡಬಿದಿರೆಯ ಗಂಟಾಲಕಟ್ಟೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಯಕ್ಷಗಾನ ಹಿರಿಯ ಕಲಾವಿದರೊಬ್ಬರು ಸಾವನ್ನಪ್ಪಿದ್ದಾರೆ.

ವಾಮನ ದೇವಾಡಿಗ(46) ಮೃತ ಯಕ್ಷಗಾನ ಕಲಾವಿದ. ಕುಂದಾಪುರದ ಕೊಂಕಿ‌ ಎಂಬಲ್ಲಿ ಯಕ್ಷಗಾನ ಮುಗಿಸಿ ಬರುವಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಬೈಕ್​​ನಲ್ಲಿದ್ದ ವಾಮನ ದೇವಾಡಿಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹಿರಿಯಡ್ಕ ಮೇಳದ ಕಲಾವಿದರಾಗಿದ್ದ ವಾಮನ ದೇವಾಡಿಗ, ಸ್ತ್ರೀ ವೇಷ, ಕಥಾ ನಾಯಕನ ಪಾತ್ರ ಮಾಡುವುದರಲ್ಲಿ ಖ್ಯಾತಿ ಪಡೆದುಕೊಂಡಿದ್ದರು.

error: Content is protected !!