ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ಎಸ್ ಜಲಾಶಯ ನೋಡಲು ಬಂದಿದ್ದಾಗ ಇಂಥದ್ದೊಂದು ದುರಂತ ಜರುಗಿದೆ.ಇದನ್ನು ಓದಿ –ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಂಗಾವಲು ವಾಹನ ಪಲ್ಟಿ: ಇಬ್ಬರಿಗೆ ಗಾಯ
ಮೈಸೂರಿನ ಪಡುವಾರಹಳ್ಳಿಯ ಸೃಜನ್ (20) ನದಿಗೆ ಹಾರಿದ ವಿದ್ಯಾರ್ಥಿ. ಆತ ಯಾಕೆ ಹಾರಿದ ಎಂಬುದು ಇನ್ನೂ ನಿಗೂಢವಾಗಿದೆ.
ಸೃಜನ್ ಮಂಗಳವಾರ ಸ್ನೇಹಿತರೊಂದಿಗೆ ಕೆಆರ್ಎಸ್ ಜಲಾಶಯ ಮತ್ತು ಕಾವೇರಿ ನದಿಯನ್ನು ನೋಡಲು ಬಂದಿದ್ದ.
ಕೆಆರ್ಎಸ್ ಗೇಟ್ನಿಂದ ಸುಮಾರು 150 ಮೀಟರ್ ದೂರದಲ್ಲಿ ನಿಂತು ನೋಡುತ್ತಿದ್ದ ಈತ ಏಕಾಏಕಿ ಕಾವೇರಿ ನದಿಗೆ ಧುಮುಕಿದ್ದಾನೆ. ಭೋರ್ಗರೆಯುತ್ತಿರುವ ನದಿಯ ಹರಿವಿನ ರಭಸಕ್ಕೆ ಈತ ಕೊಚ್ಚಿಕೊಂಡು ಹೋಗಿದ್ದಾನೆ.
ಸ್ನೇಹಿತರು ಈ ಕುರಿತು ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನೂ ಆತನ ಪತ್ತೆಯಾಗಿಲ್ಲ. ನಾಳೆ ಸೃಜನ್ಗಾಗಿ ಶೋಧ ಕಾರ್ಯ ನಡೆಯಲಿದೆ.
ಕೆಆರ್ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು