ಅ. 24 ರಂದು ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ವಿಶೇಷ ಕಾರ್ಯಕ್ರಮ : ಸಚಿವ ಸುನೀಲ್ ಕುಮಾರ್

Team Newsnap
2 Min Read

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ವಿವಿದೆಡೆ 7 ದಿನಗಳ ಕಾಲ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನವನ್ನು ಆಚರಿಸಲು ನಿರ್ಧರಿಸಲಾಗಿದೆ.

ಈ ಅಭಿಯಾನದ ಅಂಗವಾಗಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ವಿವರಗಳನ್ನು ಇಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಬಿಡುಗಡೆ ಮಾಡುವರು.
‘ಮಾತಾಡ್ ಮಾತಾಡ್ ಕನ್ನಡ’ ಎನ್ನುವ ಘೋಷ ವಾಕ್ಯದ ಅಡಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ.

  • ಅಕ್ಟೋಬರ್ 24ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಬೆಳಿಗ್ಗೆ 10ಗಂಟೆಗೆ ಮೈಸೂರು ರಂಗಾಯಣದಿಂದ ಡಾ. ಎಸ್.ಎಲ್. ಬೈರಪ್ಪ ನವರ ʻಪರ್ವʼ ನಾಟಕ ಪ್ರದರ್ಶನವಾಗಲಿದೆ.
  • ಬೆಂಗಳೂರು ನಾಟಕ ಅಕಾಡಮಿ ಯವರಿಂದ ಜಾಲಹಳ್ಳಿಯ ಬಿ.ಇ.ಎಲ್ ರಂಗಮಂದಿರದಲ್ಲಿ ರಂಗ ಪಯಣ ಪ್ರಸ್ತುತ ಪಡಿಸುವ ʻಗುಲಾಬಿ ಗ್ಯಾಂಗ್ʼ ನಾಟಕ ನಡೆಯಲಿದೆ.
  • ಅಕ್ಟೋಬರ್ 25ರಂದು ಸಂಜೆ 5ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿʻ ಮೂಕನ ಮಕ್ಕಳುʼ ನಾಟಕ ಪ್ರದರ್ಶನವಾಗಲಿದೆ.
  • ಮಲ್ಲೇಶ್ವರಂನ ಎಮ್.ಇ.ಎಸ್ ಕಾಲೇಜ್ ಸಭಾಭವನದಲ್ಲಿ ದೃಶ್ಯಕಾವ್ಯ ಪ್ರಸ್ತುತ ಪಡಿಸುವ ʻಮಾಯಾಬೇಟೆʼ ನಾಟಕ ಪ್ರದರ್ಶನವಾಗಲಿದೆ.
  • ಅಕ್ಟೋಬರ್ 26 ಸಂಜೆ 6.30ಕ್ಕೆ ರಂದು ಶಿವಮೊಗ್ಗ ರಂಗಾಯಣದವರಿಂದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ʻಚಾಣಕ್ಯ ಪ್ರಪಂಚʼ
  • ದಾವಣಗೆರೆ ವೃತಿ ರಂಗಾಯಣದಿಂದ ಸಂಜೆ 6.30ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ʻರಾಶಿ ಚಕ್ರʼ, ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಸ್ತುತ ಪಡಿಸುವ ʻಶಿವರಾತ್ರಿʼ ನಾಟಕ ಹಾಗೂ ಮೈಸೂರು ರಂಗಾಯಣದಿಂದ ಪೀಣ್ಯದ ಬಿ.ಇ.ಎಲ್ ನಲ್ಲಿ ʻಮೂಕನ ಮಕ್ಕಳುʼ ನಾಟಕ ಪ್ರದರ್ಶನ ಗೊಳ್ಳಲಿದೆ.
  • ಅಕ್ಟೋಬರ್ 27ರಂದು ಸಂಜೆ 6.30ಕ್ಕೆ ಮೈಸೂರು ರಂಗಾಯಣದಿಂದ ಬೆಂಗಳೂರಿನ ಕಲ್ಯಾಣ ನಗರದ ಡಾ. ಶಿವಕುಮಾರಸ್ವಾಮಿ ಜ್ಞಾನಸೌಧದಲ್ಲಿ ʻಮೂಕನ ಮಕ್ಕಳು

ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯದಲ್ಲಿ ದಾವಣಗೆರೆ ವೃತಿ ರಂಗಾಯಣದವರಿಂದ ʻಕನ್ನಡ ಕಲಿಯೋಣ ಬಾʼ ನಾಟಕ,

  • ಧಾರವಾಡ ರಂಗಾಯಣದವರಿಂದ ಮಲ್ಲೇಶ್ವರಂ ಕುವೆಂಪು ಸಭಾಂಗಣದಲ್ಲಿ ʻಕತ್ತಲೆಯ ಕೊರೊನಾʼ ನಾಟಕ ನಡೆಯಲಿದೆ.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ಮೆಜೆಸ್ಟಿಕ್ ಆರ್.ಎಂ.ಎಸ್. ಕನ್ನಡ ಸಂಘದಲ್ಲಿ ಮಹದೇವಯ್ಯ ತಂಡ ದವರಿಂದ ಸುಗಮ ಸಂಗೀತ ಕಾಯಕ್ರಮ ನಡೆಯಲಿದೆ.
  • ಅಕ್ಟೋಬರ್ 28ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಕುರುಬಾರಹಳ್ಳಿಯ ರಾಜ್ ಕುಮಾರ್ ಸಭಾಂಗಣದಲ್ಲಿ ʻಕತ್ತಲೆ ಕರೊನಾʼ ನಾಟಕ, ಸುಚಿತ್ರ ಫಿಲಂ ಸೋಸೈಟಿಯಲ್ಲಿ ʻಶ್ರದ್ಧ ಮತ್ತು ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳುʼ ನಾಟಕ
  • ಕಲಬುರಗಿ ರಂಗಾಯಣ ದವರಿಂದ ಆರ್ಪಿಸಿ ಬಡಾವಣೆಯ ಗ್ರಂಥಾಲಯ ಸಭಾಗಂಣದಲ್ಲಿ ಸಿರಿ ಪುರಂದರ ನಾಟಕ ನಡೆಯಲಿದೆ.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ರಾಜಾಜಿನಗರದ ಬಾಲಮೋಹನ ವಿದ್ಯಾಲಯದಲ್ಲಿ ಹೆಚ್.ಎನ್.ಮೀರಾ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
  • ಅಕ್ಟೋಬರ್ 29ರಂದು ಸಂಜೆ 6.30ಕ್ಕೆ ಧಾರವಾಡ ರಂಗಾಯಣದವರಿಂದ ಬ್ಯಾಟರಾಯನಪುರ ನಗರಸಭಾ ಸಭಾಂಗಣದಲ್ಲಿ ʻಕತ್ತಲೆ ಕರೊನಾʼ ನಾಟಕ

*ಕಲಬುರಗಿ ರಂಗಾಯಣದಿಂದ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯದಲ್ಲಿ ಸಿರಿ ಪುರಂದರ ನಾಟಕಗಳು ನಡೆಯಲಿದೆ.

  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ವತಿಯಿಂದ ವಿಜಯನಗರದ ಕರ್ನಾಟಕ ವಿದ್ಯುತ್ ಕಾರ್ಖಾನೆ ಸಂಘದಲ್ಲಿ ʻಸವಿಗಾನ ಲಹರಿʼ ಸಂಗೀತ ಕಾರ್ಯಕ್ರಮ ನಡೆಯಲಿದೆ.
  • ಅಕ್ಟೋಬರ್ 30ರಂದು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ ಕಾಮಾಕ್ಷಿಪಾಳ್ಯದ ರಾಘವೇಂದ್ರ ಆಡಿಟೋರಿಯಂ ನಲ್ಲಿ ʻಕಾನಿನ ಪೌರಾಣಿಕʼ ನಾಟಕ ಪ್ರದರ್ಶನವಾಗಲಿದ.
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಕುಮಾರಸ್ವಾಮಿ ಲೇಔಟ್ ಕೇಂದ್ರ ಗಂಥಾಲಯದಲ್ಲಿ ʻ ಕನ್ನಡ ಗೀತೆಗಳುʼ ಎನ್ನುವ ಸಂಗೀತ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ.
  • ಅಕ್ಟೋಬರ್ 31ರಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರಿಂದ ಮಲ್ಲೇಶ್ವರಂನ ಸೇವಾಸದನದಲ್ಲಿ ʻಕನ್ನಡ ಗೀತೆಗಳಿಗೆ ನೃತ್ಯʼ ಕಾಯಕ್ರಮ ನಡೆಯಲಿದೆ.
Share This Article
Leave a comment