December 23, 2024

Newsnap Kannada

The World at your finger tips!

siddu,women,money

A Muslim woman threw the 2 lakh compensation money given to her by Siddu! ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ! #thenewsnap #Latestnews #Siddu #Congress #Women #Money #COmpensation #India #Bengaluru #Mandya #Mysuru

ಸಿದ್ದು ಕೊಟ್ಟ 2 ಲಕ್ಷ ಪರಿಹಾರದ ಹಣವನ್ನು ಅವರ ಮೇಲೆಯೇ ಎಸೆದ ಮುಸ್ಲಿಂ ಮಹಿಳೆ!

Spread the love

ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಪರಿಹಾರ ಹಣವನ್ನು ಪಡೆಯಲು ನಿರಾಕರಿಸಿ ಮುಸ್ಲಿಂ ಮಹಿಳೆಯೊಬ್ಬರು ದುಡ್ಡನ್ನು ಎಸೆದ ಘಟನೆ ನಡೆದಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿನ್ನೆಯಿಂದ ಎರಡು ದಿನಗಳ ಕಾಲ ಬಾಗಲಕೋಟೆ ಪ್ರವಾಸದಲ್ಲಿದ್ದಾರೆ.ಇದನ್ನು ಓದಿ -ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಿ ನಟ ಪ್ರತಾಪ್

ಇಂದು ಕೆರೂರು ಘರ್ಷಣೆಯಲ್ಲಿ ಗಾಯಾಳುಗಳಿಗೆ ಸಾಂತ್ವನ ಹೇಳಲು ಸಿದ್ದರಾಮಯ್ಯ ಹೋಗಿದ್ದರು. ಈ ವೇಳೆ ಸಿದ್ದರಾಮಯ್ಯ ಮಹಿಳೆಯೊಬ್ಬರಿಗೆ ಪರಿಹಾರವಾಗಿ 2 ಲಕ್ಷ ರೂಪಾಯಿ ನೀಡಿದ್ದರು. ಇದಕ್ಕೆ ಆಕ್ರೋಶಗೊಂಡ ಮಹಿಳೆ ಆ ದುಡ್ಡನ್ನು ಸಿದ್ದರಾಮಯ್ಯರ ಕಾರಿನೊಳಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

‘ನಮ್ಗೆ ದುಡ್ಡು ಬೇಡ.. ಶಾಂತಿ ಬೇಕು’ ಎಂದು ಸಿದ್ದರಾಮಯ್ಯರತ್ತ ದುಡ್ಡನ್ನು ಎಸೆದಿದ್ದಾಳೆ. ಮಹಿಳೆ ದುಡ್ಡನ್ನು ಎಸೆಯುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ.

ಸಿದ್ದರಾಮಯ್ಯಘರ್ಷಣೆಯಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನಿಫ್, ದಾವಲ್ ಮಲಿಕ್, ರಾಜೆಸಾಬ್, ರಫೀಕ್ ಆರೋಗ್ಯ ವಿಚಾರಿಸಿದರು.
ನಂತರ ರಜ್ಮಾ ಎಂಬ ಮಹಿಳೆಗೆ ಸಿದ್ದರಾಮಯ್ಯ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಆದರೆ ಹಣವನ್ನು ಮಹಿಳೆ ತೆಗೆದುಕೊಳ್ಳಲು ನಿರಾಕರಿಸಿದ್ದಾಳೆ.

ನಂತರ ಸಿದ್ದರಾಮಯ್ಯರ ಕಾರನ್ನು ಹಿಂಬಾಲಿಸಿ ಆ ಹಣವನ್ನು ಕಾರಿನೊಳಗೆ ಎಸೆದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ.

Copyright © All rights reserved Newsnap | Newsever by AF themes.
error: Content is protected !!