ನಿಷ್ಕರುಣೆಯ ತಾಯಿಯೊಬ್ಬಳು ತಾನೇ ಹೆತ್ತ ಗಂಡು ಹಸುಗೂಸನ್ನು 40 ಅಡಿ ಆಳದ ಪಾಳು ಬಾವಿಗೆ ಎಸೆದು ಹೋದ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಗು ಜನನಿಸಿದ ಕೆಲ ನಿಮಿಷದಲ್ಲೆ ಪಾಳು ಬಾವಿಗೆ ಎಸೆದಿದ್ದಾಳೆ ಆ ಬಾವಿಯಲ್ಲಿ ಹಾವೊಂದು ಇದೆ. ಹಾವಿನ ಬಳಿ ಇದ್ದರೂ ಮಗುವಿಗೆ ಹಾವು ಏನು ಮಾಡಿರಲಿಲ್ಲ.
ಈ ಬಾವಿಯ ಮಾರ್ಗ ಮಧ್ಯೆ ತೋಟಕ್ಕೆ ಹೊರಟಿದ್ದ ರೈತ ಮಹಿಳೆಯೊಬ್ಬಳಿಗೆ ಮಗು ಅಳುವ ಶಬ್ಧ ಕೇಳಿ ಬಾವಿಗೆ ಇಣುಕಿದಳು. ಈ ವೇಳೆ ಅಳುತ್ತಿದ್ದ ಮಗುವಿನ ದೃಶ್ಯ ಆಕೆಯ ಗಮನಕ್ಕೆ ಬಂದ ಮಹಿಳೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ ಕೂಡಲೇ ಬಾವಿಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ.
ಬಳಿಕ ಮಗುವಿಗೆ ಬೇರೆ ತಾಯಿಯೊಬ್ಬಳು ಎದೆ ಹಾಲುಣಿಸಿ ಮಾನವೀಯತೆ ಮೆರೆದ್ದಾರೆ . ನಂತರ ಮಗುವನ್ನು ಆರೈಕೆ ಮಾಡಿದ ಗ್ರಾಮದ ಮಹಿಳೆಯರು. ಈ ಬಗ್ಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿ, ಮಂಡ್ಯ ಮಿಮ್ಸ್ ಆಸ್ಪತ್ರೆ ಮಗುವನ್ನು ದಾಖಲಿಸಿದ್ದಾರೆ. ಕೆಆರ್ ಪೇಟೆಯ ತ್ರಿವೇಣಿ ಸಂಗಮದ ಮಹಾ ಕುಂಭಮೇಳಕ್ಕೆ ಯುಪಿ ಸಿಎಂ ಯೋಗಿಆದಿತ್ಯನಾಥ
ಇದೀಗ ಮಗುವಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಆರೋಗ್ಯಕರವಾಗಿ ಇದೆ. ಯಾವುದೇ ಪ್ರಾಣಾಪಾಯವಿಲ್ಲ, ಬಾವಿ ಮೇಲಿಂದ ಎಸೆದಿರುವ ಕಾರಣಕ್ಕಾಗಿ ಮಗು ಬೆನ್ನಿನ ಹಿಂದೆ ಸಣ್ಣ ಪುಟ್ಟ ಗಾಯವಾಗಿದೆ.
ಇನ್ನೂ 10, 15 ದಿನ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುವುದು ಎಂದು ಮಂಡ್ಯ ಮಿಮ್ಸ್ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.
More Stories
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು
ಮಂಡ್ಯ ರೈತರಿಗೆ ಶಾಕ್ – ಹಾಲಿನ ಖರೀದಿ ದರದಲ್ಲಿ ಲೀಟರ್ಗೆ 1 ರು ಕಡಿತ
ಮಂಡ್ಯ : ಜಿಲ್ಲೆಯ ಕೊನೆ ಭಾಗದ ಬೆಳೆಗಳಿಗೆ ನೀರು ಹರಿಸಿ – ಕೃಷಿ ಸಚಿವ ಸಿ ಆರ್ ಎಸ್