October 7, 2022

Newsnap Kannada

The World at your finger tips!

LIKITH

ಕಾಲೇಜ್ ಗೆ ಬಂಕ್ ಹಾಕಿ ಗೆಳೆಯನ ಜೊತೆ ಜಾಲಿ ಟ್ರಿಪ್ : ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಸಾವು- ಗೆಳೆಯ ಬಚಾವ್

Spread the love

ಕಾಲೇಜಿಗೆ ಹೋಗುವೆ ಎಂದು ಹೇಳಿ ಮನೆಯಿಂದ ಬಂದ ವಿದ್ಯಾರ್ಥಿನಿ ಕಾಲೇಜಿಗೆ ಬಂಕ್ ಮಾಡಿ, ತನ್ನ ಗೆಳೆಯನೊಂದಿಗೆ ಜಲಾಶಯ ನೋಡಿ ವಾಪಾಸ್ ಬರುವಾಗ ಚಿಕ್ಕಬಳ್ಳಾಪುರ ಬಳಿ ಲಾರಿಯ ಚಕ್ರದಡಿ ಸಿಲುಕಿ ವಿದ್ಯಾರ್ಥಿನಿಯೊಬ್ಬಳು ಬಲಿಯಾಗಿದ್ದಾಳೆ.

ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸೇತುವೆಯ ಕೆಳಭಾಗದಲ್ಲಿ ನಡೆದ ಅಪಘಾತದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ಚೈತ್ರಾ ಸಾವನ್ನಪ್ಪಿದ್ದಾರೆ. ಮೃತ ಚೈತ್ರಾ ಕೆ.ಆರ್ ಪುರಂ ನಿವಾಸಿ. ಗೆಳೆಯ ನಿಖಿಲ್ ಗೌಡ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ. ಬೆಳಗ್ಗೆ ಕಾಲೇಜಿಗೆ ಹೋಗ್ತೀನಿ ಅಂತ ಮನೆಯಿಂದ ಬಂದಿರೋ ಚೈತ್ರಾ ಕಾಲೇಜಿಗೆ ಹೋಗದೆ ತನ್ನ ಗೆಳೆಯ ಎಂಇಎಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿ ಲಿಖಿತ್ ಗೌಡ ಜೊತೆ (ಕೆಎ 05 ಎಲ್​ಡಿ 5029 ) ಆಕ್ಸಿಸ್ ಸ್ಕೂಟಿ ಮೂಲಕ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯಕ್ಕೆ ಜಾಲಿ ಟ್ರಿಪ್​ಗೆ ಆಗಮಿಸಿದ್ದಳು.

ಕಾಲೇಜ್ ಬಂಕ್ ಮಾಡಿ ಮೃತ ಚೈತ್ರಾ ಹಾಗೂ ಲಿಖಿತ್ ಸೇರಿದಂತೆ ಆರು ಮಂದಿ ವಿದ್ಯಾರ್ಥಿಗಳು 3 ಬೈಕ್ ಗಳ ಮೂಲಕ ಶ್ರೀನಿವಾಸ ಸಾಗರ ಜಲಾಶಯಕ್ಕೆ ಆಗಮಿಸಿದ್ದರು. ತಲಕಾವೇರಿಯಲ್ಲಿ ಅ. 17 ರಂದು ಸಂಜೆ 7.21 ಕ್ಕೆ ತೀರ್ಥೋದ್ಭವ

ಜಲಾಶಯದ ಬಳಿ ಜಾಲಿ ರೌಂಡ್ಸ್ ಹಾಕಿ ಚಿಕ್ಕಬಳ್ಳಾಪುರ ನಗರದ ಮೂಲಕ ಮರಳಿ ಬೆಂಗಳೂರಿಗೆ ವಾಪಾಸ್ಸಾಗುವಾಗ ವಾಪಸಂದ್ರ ಸೇತುವೆ ಕೆಳಭಾಗದಲ್ಲಿ ಏಕಾಏಕಿ ಸ್ಕೂಟಿ ಚಾಲನೆ ಮಾಡ್ತಿದ್ದ ಲಿಖಿತ್ ಗೌಡ ಹೈವೆಗೆ ಎಂಟ್ರಿ ಕೊಟ್ಟಿದ್ದನಂತೆ. ಬಾಗೇಪಲ್ಲಿ ಕಡೆಯಿಂದ ಅತಿ ವೇಗವಾಗಿ ಬರ್ತಿದ್ದ ಕಲ್ಲು ಪುಡಿ ತುಂಬಿದ್ದ ಟಿಪ್ಪರ್ ಲಾರಿಗೆ ಸ್ಕೂಟಿಗೆ ಟಚ್ ಆಗಿದ್ದು, ಲಿಖಿತ್ ಗೌಡ ಹಾಗೂ ಚೈತ್ರಾ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಚೈತ್ರಾ ಮೇಲೆ ಟಿಪ್ಪರ್ ಲಾರಿ ಹರಿದಿದೆ, ಚೈತ್ರಾ ಚಕ್ರದಡಿ ಸಿಲುಕಿ ನಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು ಘಟನೆಯಲ್ಲಿ ಲಿಖಿತ್ ಗೌಡ ಕಾಲಿಗೆ ಗಂಭೀರ ಗಾಯವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!