ಎಸ್ ಐ , ಡಿವೈಎಸ್ ಪಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಠಾಣೆಯ ಮುಂದೆ ವಿಷ ಸೇವಿಸಿದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಪೊಲೀಸ್ ಠಾಣೆ ಮುಂದೆ
ಜರುಗಿದೆ,
ಎನ್.ಗೌರಿಪುರ ಗ್ರಾಮದ ಗಿರೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತನನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ಷುಲ್ಲಕ ಕಾರಣಗಳಿಗೆ ಎರಡು ಸಮುದಾಯದ ಗುಂಪುಗಳ ನಡುವೆ ಗಲಾಟೆ ನಡೆದ ಕಾರಣ ಠಾಣೆಯಲ್ಲಿ ರಾಜಿ ಪಂಚಾಯ್ತಿ ಸಭೆ ಇತ್ತು.
ಈ ಸಂಧಾನ ಸಭೆಯಲ್ಲಿ ಎಸ್.ಐ.ಮಹೇಶ್ ಹಾಗೂ ಡಿವೈಎಸ್ಪಿ ಶ್ರೀಧರ್ ರಾಜಿ ಪಂಚಾಯ್ತಿ ಕಾರ್ಯ ನಡೆಯುವ ವೇಳೆಯಲ್ಲಿ ವಿನಾಕಾರಣ ಬೈದು ಮಾನಹಾನಿ ಮಾಡಿದ್ದಾರೆಂದು ಆರೋಪಿಸಿರುವ ಗಿರೀಶ್ ಗಲಾಟೆ ಬಿಡಿಸಿದ್ದಕ್ಕೆ ಪೊಲೀಸರು ಹೆದರಿಸಿರುವುದಾಗಿ ಆರೋಪಿಸಿದ್ದಾರೆ.
ಎಸ್ಐ, ಡಿವೈಎಸ್ಪಿಯಿಂದ ಬೈಗುಳ ಹಾಗೂ ಬೆದರಿಕೆಗೆ ಆ ವ್ಯಕ್ತಿ ನೊಂದು ಹೋಗಿದ್ದಾರೆ,ಅಷ್ಟೇ ಅಲ್ಲದೇ ಹೋಟೆಲ್ನಲ್ಲಿ ಜನರಿಗೆ ತಾರತಮ್ಯ ಮಾಡುವುದಾಗಿಯೂ ತಿಳಿಸಿರುವ ಇವರು, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- ಕೆಯುಡಬ್ಲೂೃಜೆ ವಾರ್ಷಿಕ ಪ್ರಶಸ್ತಿಗಳ ಪ್ರಕಟ
- ಸಂಕ್ರಾಂತಿ….
- ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
- ರೈತರ ಕ್ರಾಂತಿ ಸಂಕ್ರಾಂತಿ
- ಮಕರ ಸಂಕ್ರಾಂತಿ ಶಾಸ್ತ್ರ ರೀತ್ಯ ಆಚರಣೆ
More Stories
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
ಹಣ ಡಬ್ಲಿಂಗ್ ಹೆಸರಲ್ಲಿ 2 ಕೋಟಿ ರೂಪಾಯಿ ವಂಚನೆ: 7 ಮಂದಿ ಬಂಧನ