ಮತಾಂತರ , ಹನಿ ಟ್ರಾಪ್..ISIS; ಇದಿನಬ್ಬ ಸೊಸೆ ದೀಪ್ತಿ ಭಯಾನಕ ಹಿಸ್ಟರಿ ಬಿಚ್ಚಿಟ್ಟ NIA

Team Newsnap
1 Min Read

ಉಗ್ರರ ವಿರುದ್ಧ ಸಮರ ಸಾರಿರುವ ರಾಷ್ಟ್ರೀಯ ತನಿಖಾ ತಂಡ (ಎನ್​ಐಎ) ಮಂಗಳೂರಿನ ಉಳ್ಳಾಳದಲ್ಲಿ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ ಎಂಬ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಅನೇಕ
ಸ್ಪೋಟಕ ಸಂಗತಿಗಳು ಬಯಲಾಗಿವೆ

ದಂತ ವೈದ್ಯೆ ಆಗಿರುವ ದೀಪ್ತಿ ಮಾರ್ಲಾ, ಹನಿಟ್ರ್ಯಾಪ್ ಮೂಲಕ ಯುವಕರನ್ನು ಮತಾಂತರಗೊಳಿಸಿ ಐಸಿಸ್ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂಬ ಸಂಗತಿ ಬಹಿರಂಗಗೊಂಡಿದೆ

ದೀಪ್ತಿ ಮಾರ್ಲಾ ಹಿಸ್ಟರಿ ಹೀಗಿದೆ:

ದೀಪ್ತಿ ಮಾರ್ಲಾ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವಳು. ಓದಲು ಮಂಗಳೂರಿನ ಮೆಡಿಕಲ್ ಕಾಲೇಜಿಗೆ ಬಂದಾಗ ಮಾಜಿ ಶಾಸಕ, ದಿವಂಗತ ಇದಿನಬ್ಬರ ಪುತ್ರ ಬಿ.ಎಂ.ಬಾಷಾರ ಎರಡನೇ ಮಗ ಅನಾಸ್​ರನ್ನ ಪ್ರೀತಿಸಿ ಮದುವೆಯಾಗಿದ್ದಳು.

ಇನ್ನು ಮದ್ವೆ ಆಗುವುದಕ್ಕೂ ಮುನ್ನ ಈಕೆ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು.
ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ನಂತರ ಕ್ರೋನಿಕಲ್ ಪೌಂಡೇಶನ್ ಎಂಬ ಇನ್​​ಸ್ಟಾಪೇಜ್ ಮೂಲಕ ಐಸಿಸ್​ಗೆ ಕೆಲಸ ಮಾಡಲು ಶುರು ಮಾಡಿಕೊಂಡಿದ್ದಳು.

ನಂತರ ಪತಿ ಅನಾಸ್ ಅಬ್ದುಲ್ ರೆಹಮಾನ್, ಸಂಬಂಧಿ ಅಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದಳು. ಸೋಷಿಯಲ್ ಮೀಡಿಯಾಗಳಲ್ಲಿ ಸುಮಾರು 15 ನಕಲಿ‌ ಖಾತೆಗಳನ್ನು ಹೊಂದಿದ್ದಳು.

ಈ ಹಿಂದೆ ಎನ್​​ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್​ನನ್ನು ಮತಾಂತರ ಮಾಡಿ ಐಸಿಸ್​ಗೆ ಕೆಲಸ ಮಾಡುವಂತೆ ಮಾಡಿದ್ದು ಇದೇ ದೀಪ್ತಿ ಅನ್ನೋದು ತನಿಖೆಯಿಂದ ತಿಳಿದುಬಂದಿದೆ ಅಂತಾ ಹೇಳಲಾಗಿದೆ.

ಇದುವರೆಗೂ 10 ಯುವಕರ ಮತಾಂತರ ಮಾಡಿದ ನಂತರ ಮಾದೇಶ್ ಪೆರುಮಾಳ್​​ನನ್ನು ಹನಿಟ್ರಾಪ್ ಮಾಡಲು‌ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದಳಂತೆ. ಸದ್ಯ ದೀಪ್ತಿ ಮಾರ್ಲಾಳನ್ನು ದೆಹಲಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Share This Article
Leave a comment