ಹೆಂಡತಿ ಶವದ ಮುಂದೆಯೇ ಜೀವ ಬಿಟ್ಟ ಗಂಡ: ಸಾವಿನಲ್ಲೂ ಒಂದಾದ ಜೋಡಿ

Team Newsnap
1 Min Read

ನಂಜನಗೂಡು : ಹೆಂಡತಿ ಶವದ ಎದುರೇ ಗಂಡ ಜೀವ ಬಿಟ್ಟ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾಗ್ಯಮ್ಮ (75) ಮತ್ತು ರಂಗಸ್ವಾಮಿ ಅಲಿಯಾಸ್ ಎಳನೀರು ಕರಿಯಯ್ಯ (80) ಮೃತ ದುರ್ದೈವಿಗಳು.

ದಾಂಪತ್ಯ ಪ್ರೀತಿಯನ್ನು ಅತ್ಯಂತ ಜೋಪಾನ ಮಾಡಿಕೊಂಡಿದ್ದ ಹಿರಿಯ ಜೋಡಿ ಸಾವಿನಲ್ಲೂ ಒಂದಾಗಿದ್ದಾರೆ.

ಪತಿ ರಂಗಸ್ವಾಮಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳಿಂದ ಇವರಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ರಂಗಸ್ವಾಮಿ ಹೆಚ್ಚುದಿನ ಬದುಕುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಚಿಂತೆಗೀಡಾಗಿದ್ದ ಪತ್ನಿ ಭಾಗ್ಯಮ್ಮ ಆಸ್ಪತ್ರೆಯಿಂದ ಮೊನ್ನೆ ಮನೆಗೆ ವಾಪಸ್ಸಾಗಿದ್ದರು. ತಡ ರಾತ್ರಿ ಪತ್ನಿ ಭಾಗ್ಯಮ್ಮ ಮಲಗಿದವರು ಬೆಳಿಗ್ಗೆ ಮೇಲೇಳಲಿಲ್ಲ. ಸ್ವಾಭಾವಿಕವಾಗಿಯೇ ಮೃತಪಟ್ಟಿದ್ದರು.

ಇತ್ತ ಪತ್ನಿ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಗಸ್ವಾಮಿ ಡಿಸ್ಟಾರ್ಜ್ ಮಾಡಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ.

ಹೆಂಡತಿಯ ಅಗಲಿಕೆಯ ನೋವಿನಿಂದ ಆಘಾತಕ್ಕೊಳಗಾಗಿದ್ದ ರಂಗಸ್ವಾಮಿ ಹೆಂಡತಿಯ ಶವದ ಮುಂದೆಯೇ ಪ್ರಾಣ ಬಿಟ್ಟಿದ್ದಾರೆ.ಬೆಂ-ಮೈ ಎಕ್ಸ್‌ಪ್ರೆಸ್ ನಲ್ಲಿ ಭೀಕರ ಅಪಘಾತ – ಮಾಜಿ ಸೈನಿಕ ಸಾವು, ನಾಲ್ವರಿಗೆ ಗಂಭೀರ ಗಾಯ

ನಿನ್ನೆ ದಂಪತಿಯ ಮೃತದೇಹಗಳ ಅಂತ್ಯಕ್ರಿಯೆ ಗ್ರಾಮದ ಸ್ಮಶಾನದಲ್ಲಿ ನೆರವೇರಿದೆ.

Share This Article
Leave a comment