ಬೆಂ-ಮೈ ಎಕ್ಸ್‌ಪ್ರೆಸ್ ನಲ್ಲಿ ಭೀಕರ ಅಪಘಾತ – ಮಾಜಿ ಸೈನಿಕ ಸಾವು, ನಾಲ್ವರಿಗೆ ಗಂಭೀರ ಗಾಯ

Team Newsnap
1 Min Read

ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಾಜಿ ಸೈನಿಕರೊಬ್ಬರು ಸಾವನ್ನಪ್ಪಿ, ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಬಳಿಯ ಎಕ್ಸ್‌ಪ್ರೆಸ್ ವೇಯಲ್ಲಿ ಭಾನುವಾರ ಬೆಳಗ್ಗೆ 6:30ರ ವೇಳೆಯಲ್ಲಿ ಈ ಘಟನೆ ಜರುಗಿದೆ.

ಆನೇಕಲ್ ಮೂಲದ ಮಾಜಿ ಸೈನಿಕ ಕಿಶೋರ್ ಬಾಬು (45) ಸಾವನ್ನಪ್ಪಿರುವ ವ್ಯಕ್ತಿ.

ಆನೇಕಲ್‌ನಿಂದ ತಮಿಳುನಾಡಿಗೆ ಎಕ್ಸ್‌ಯುವಿ ಮಹೇಂದ್ರ ಕಾರಿನಲ್ಲಿ ಕಿಶೋರ್ ಹಾಗೂ ನಾಲ್ವರು ಪ್ರಯಾಣಿಸುತ್ತಿದ್ದರು
ಅತಿ ವೇಗವಾಗಿ ಬರುತ್ತಿದ್ದ ಮಹೇಂದ್ರ ಕಾರು ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ಕಿಶೋರ್ ಸಾವನ್ನಪ್ಪಿದ್ದಾರೆ.

ನಂತರ ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿದಿದ್ದು, ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಉಳಿದ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ರಾಜ್ಯದಲ್ಲಿ ಮತ್ತೆ 23 ಡಿವೈಎಸ್ ಪಿ, 192 `PSI’ ಗಳ ವರ್ಗಾವಣೆ

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article
Leave a comment