ಶ್ರೀರಂಗಪಟ್ಟಣ, ಮದ್ದೂರಿನ ಜಮೀನುಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು

Team Newsnap
1 Min Read
A herd of elephants camped in the fields of Maddur, Srirangapatna ಶ್ರೀರಂಗಪಟ್ಟಣ, ಮದ್ದೂರಿನ ಜಮೀನುಗಳಲ್ಲಿ ಬೀಡುಬಿಟ್ಟಿರುವ ಆನೆಗಳ #mandya

ಮಂಡ್ಯ: ಕಾಡಿನಿಂದ ಹೊರಬಂದಿರುವ 10 ಆನೆಗಳ ಹಿಂಡು ಕನಕಪುರ, ಸಾತನೂರಿನ ಮೂಲಕ ಶ್ರೀರಂಗಪಟ್ಟಣ ಹಂಪಾಪುರ ಗ್ರಾಮದ ಜಮೀನಿನಲ್ಲಿ ಬೀಡುಬಿಟ್ಟಿವೆ.

ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನಿಂದ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.

ಭಾನುವಾರ ಬೆಳ್ಳಂಬೆಳಗ್ಗೆ ಮತ್ತೊಂದು ಗಜಪಡೆ ಮದ್ದೂರು ಪಟ್ಟಣಕ್ಕೆ ಕಾಲಿಟ್ಟಿವೆ. ರಾಮನಗರ ಜಿಲ್ಲೆಯ ತೆಂಗನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ನಾಲ್ಕು ಆನೆಗಳು ಮದ್ದೂರು ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಶಿಂಷಾ ನದಿಯಲ್ಲಿ ಬೀಡುಬಿಟ್ಟಿವೆ.

ದೇವಸ್ಥಾನದ ಅರ್ಚಕರು ಹಾಗೂ ಭಕ್ತರ ಮೊಬೈಲ್‌ಗಳಲ್ಲಿ ಗಜಪಡೆಯ ದೃಶ್ಯ ಸೆರೆಯಾಗಿವೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಆನೆಗಳ ಹಿಂಡನ್ನು ಕಂಡು ಗಾಬರಿಗೊಂಡಿದ್ದಾರೆ.

ಆನೆಗಳನ್ನು ಕಂಡ ತಕ್ಷಣವೇ ದೇವಸ್ಥಾನದ ಆಡಳಿತ ಮಂಡಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.ಹೆಚ್ಚಳವಾದ ʻಮದ್ರಾಸ್ ಐʼ ಪ್ರಕರಣ – ಮುಂಜಾಗೃತೆ – ಪರಿಹಾರ ಏನು ?

ಈ ಗಜಪಡೆ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಮದ್ದೂರು ಪಟ್ಟಣದ ಕಡೆ ತೆರಳದಂತೆ ಸಿಬ್ಬಂದಿ ಕಾವಲಿರಿಸಿದ್ದಾರೆ.

WhatsApp Image 2023 07 21 at 9.21.33 PM
Share This Article
Leave a comment