ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನಿಂದ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.
ಭಾನುವಾರ ಬೆಳ್ಳಂಬೆಳಗ್ಗೆ ಮತ್ತೊಂದು ಗಜಪಡೆ ಮದ್ದೂರು ಪಟ್ಟಣಕ್ಕೆ ಕಾಲಿಟ್ಟಿವೆ. ರಾಮನಗರ ಜಿಲ್ಲೆಯ ತೆಂಗನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ನಾಲ್ಕು ಆನೆಗಳು ಮದ್ದೂರು ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಶಿಂಷಾ ನದಿಯಲ್ಲಿ ಬೀಡುಬಿಟ್ಟಿವೆ.
ದೇವಸ್ಥಾನದ ಅರ್ಚಕರು ಹಾಗೂ ಭಕ್ತರ ಮೊಬೈಲ್‌ಗಳಲ್ಲಿ ಗಜಪಡೆಯ ದೃಶ್ಯ ಸೆರೆಯಾಗಿವೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಆನೆಗಳ ಹಿಂಡನ್ನು ಕಂಡು ಗಾಬರಿಗೊಂಡಿದ್ದಾರೆ.
ಆನೆಗಳನ್ನು ಕಂಡ ತಕ್ಷಣವೇ ದೇವಸ್ಥಾನದ ಆಡಳಿತ ಮಂಡಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.ಹೆಚ್ಚಳವಾದ ʻಮದ್ರಾಸ್ ಐʼ ಪ್ರಕರಣ – ಮುಂಜಾಗೃತೆ – ಪರಿಹಾರ ಏನು ?
ಈ ಗಜಪಡೆ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಮದ್ದೂರು ಪಟ್ಟಣದ ಕಡೆ ತೆರಳದಂತೆ ಸಿಬ್ಬಂದಿ ಕಾವಲಿರಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು