ಕೋಲಾರ : ದೇವರ ಮೂರ್ತಿ ಮುಟ್ಟಿದ ದಲಿತ ಬಾಲಕನಿಗೆ 60 ಸಾವಿರ ರು.ದಂಡ: 8 ಮಂದಿ ವಿರುದ್ಧ ಪ್ರಕರಣ ದಾಖಲು

Team Newsnap
1 Min Read

ದೇವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿದ್ದಾನೆ ಎನ್ನುವ ಕಾರಣಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ರು ದಂಡ ಹಾಕಿದ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಶೊಭಾ ಹಾಗೂ ರಮೇಶ್ ದಂಪತಿ, ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು. 10 ದಿನಗಳ ಹಿಂದೆ ಗ್ರಾಮದ ಭೂತಮ್ಮ‌ ದೇವರ ಮೂರ್ತಿ ಮೆರವಣಿಗೆ ವೇಳೆ, 15 ವರ್ಷದ ಬಾಲಕ ಚೇತನ್ ದೇವರ ಉತ್ಸವ ಮೂರ್ತಿಗಳನ್ನು ಮುಟ್ಟಿದ್ದಾನೆ.

ಇದರಿಂದ ಗ್ರಾಮಸ್ಥರು ಕೋಪ ಗೊಂಡಿದ್ದಾರೆ. ದೇವರ ಮೂರ್ತಿಯನ್ನು ಶುಚಿಗೊಳಿಸಬೇಕು,ಹೀಗಾಗಿ 60 ಸಾವಿರ ರು ದಂಡ ಕಟ್ಟಬೇಕು ಊರಿನ ಮೇಲ್ಜಾತಿ ಜನರು ಒತ್ತಾಯಿಸಿದ್ದಾರೆ.

ಬಾಲಕನ ತಾಯಿ ಶೋಭ ತಮ್ಮ ಬಳಿ ನೀಡಲು ಅಷ್ಟೊಂದು ಹಣವಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಆಗ ಹಣ ನೀಡಲು ಆಗದಿದ್ದರೇ ಊರು ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ

ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜ ಮತ್ತುಎಸ್ ಪಿ ದೇವರಾಜ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡದಂತೆ ತಿಳಿಸಿದ್ದಾರೆ. ಇದನ್ನು ಓದಿ : ಪಿಎಂ ಕೇರ್ಸ್ ಫಂಡ್: ರತನ್​ ಟಾಟಾ ಟ್ರಸ್ಟಿ, ಸಲಹೆಗಾರರಾಗಿ ಸುಧಾಮೂರ್ತಿ ನೇಮಕ 

ಶೋಭಾ ಮಾಸ್ತಿ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಉಳ್ಳೇರಹಳ್ಳಿ ನಿವಾಸಿಗಳಾದ ನಾರಾಯಣಸ್ವಾಮಿ, ರಮೇಶ್, ನಾರಾಯಣಸ್ವಾಮಿ ( ಜಿ.ಪಂ ಮಾಜಿ ಸದಸ್ಯ), ವೆಂಕಟೇಶಪ್ಪ, ಕೊಟ್ಟೆಪ್ಪ, ಚಲಪತಿ, ಮೋಹನ್ ರಾವ್ (ಅರ್ಚಕ್) ಮತ್ತು ಚಿನ್ನಯ್ಯ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article
Leave a comment