February 20, 2026

Newsnap Kannada

The World at your finger tips!

niru palu

ಸಂತೆಬಾಚಹಳ್ಳಿ ಕೆರೆಯಲ್ಲಿ ಈಜಲು ಹೋಗಿ ಯುವಕರು ನೀರು ಪಾಲು

Spread the love

ಕೆರೆಯಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕೆ‌.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಪುರಾಣ ಪ್ರಸಿದ್ಧ ಗವಿರಂಗನಾಥ ಸ್ವಾಮಿ ದೇವಾಲಯದ ಕೆರೆಯ ಸಮೀಪದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿ‌ನ ಹೊಸ ಹೊಳಲು ಗ್ರಾಮದ ನಿವಾಸಿಗಳಾದ ಭರತ್(22) ಮತ್ತು ವಿನೋದ್(21) ನೀರಲ್ಲಿ ಮುಳುಗಿ ಸಾವಿಗೀಡಾದವರು.

ನಾಲ್ವರು ಸ್ನೇಹಿತರ ಜೊತೆ ಭರತ್ ಮತ್ತು ವಿನೋದ್ ದೇವಾಲಯಕ್ಕೆ ಬಂದಿದ್ದು, ಈ ವೇಳೆ ಕೆರೆಯಲ್ಲಿ ಈಜಲು ಹೋಗಿದ್ದಾಗ ಘಟನೆ ಸಂಭವಿಸಿದೆ.

ಇಬ್ಬರೂ ನೀರುಪಾಲಾಗಿದ್ದಾರೆ. ಶವಗಳ ಅಗ್ನಿಶಾಮಕದಳ ಶೋಧಕಾರ್ಯಾ ನಡೆಸುತ್ತಿದೆ. ಪಟ್ಟಣ ಪೋಲಿಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

error: Content is protected !!