ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ: ಸಚಿವ ಸುಧಾಕರ್

Team Newsnap
1 Min Read
sudhakar picture
  • 64,07,930 ಮಕ್ಕಳಿಗೆ ಪೋಲಿಯೊ ಲಸಿಕೆ
  • ಕೊರೊನಾ ಲಸಿಕೆ ಬಗ್ಗೆ ಹಿಂಜರಿಕೆ ಬಿಡಿ

ಜನವರಿ 31 ರಂದು ಪೋಲಿಯೊ ಲಸಿಕೆ ಹಾಕಿಸುವ ಕಾರ್ಯಕ್ರಮ ಇದೆ. ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 17 ರಂದು ಪೋಲಿಯೋ ಲಸಿಕೆ ನೀಡಬೇಕಿತ್ತು. ಕೊರೊನಾ ಲಸಿಕೆ ಬಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಜ. 31 ರಂದು 0-5 ವರ್ಷದ 64,07,930 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದರು.

ಲಸಿಕೆ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿಗಳ ಅಧಿಕೃತ ನಿವಾಸದಲ್ಲಿ ಚಾಲನೆ ದೊರೆಯಲಿದೆ. ಕಳೆದ 10-11 ವರ್ಷಗಳಿಂದ ಪೊಲೀಯೋ ಸೋಂಕು ಕಂಡುಬಂದಿಲ್ಲ. ಭಾರತದಲ್ಲಿ ಈ ರೋಗ ನಿಮೂರ್ಲನೆಯಾಗಿದೆ. ಆದರೆ ಪಕ್ಕದ ಪಾಕಿಸ್ತಾನ, ಅಫ್ಘನಿಸ್ತಾನದಲ್ಲಿ ಈ ರೋಗ ಇರುವುದರಿಂದ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕಿದೆ ಎಂದರು.

ನಮ್ಮಲ್ಲಿ ಒಟ್ಟು 85,05,060 ಡೋಸ್ ಪೋಲಿಯೊ ಲಸಿಕೆ ಲಭ್ಯವಿದೆ. 1,10,179 ವ್ಯಾಕ್ಸಿನೇಟರ್ ಗಳು ಇದ್ದಾರೆ. 6,645 ಸೂಪರ್ ವೈಸರ್ ತಂಡ, 904 ಮೊಬೈಲ್ ತಂಡ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 32,908 ಬೂತ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 2,90,533 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಇವತ್ತಿನವರೆಗೆ 49% ಸಾಧನೆಯಾಗಿದೆ. ಲಸಿಕೆ ಪಡೆದಿರುವುದರಿಂದ ಯಾವುದೇ ಸಾವು ಆಗಿಲ್ಲ. ಈ ಬಗ್ಗೆ ತಪ್ಪು ತಿಳಿವಳಿಕೆ ಬೇಡ. ಕೆಲವೆಡೆ ಅಡ್ಡ ಪರಿಣಾಮವಾಗಿದೆ. ಅದು ಕೂಡ ನಂತರ ಪರಿಹಾರವಾಗಿದೆ. ಇಂತಹ ಲಸಿಕೆಯ ರಾಮಬಾಣವನ್ನು ಬಳಸದಿದ್ದರೆ ವ್ಯರ್ಥವಾಗುತ್ತದೆ ಎಂದರು.

Share This Article
Leave a comment