February 19, 2026

Newsnap Kannada

The World at your finger tips!

gambir

ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಗೆ ಗಂಭೀರ ಗಾಯ, ಪತ್ನಿ ಸೇಫ್

Spread the love

ಬೆಂಗಳೂರಿನ ಸಂಜಯನಗರದಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಕಾರು ಅಪಘಾತಕ್ಕೀಡಾಗಿದೆ.

ಈ ಘಟನೆಯಲ್ಲಿ ಅನಿಲ್ ಲಾಡ್ ಅವರ ಎರಡೂ ಕೈಗಳಿಗೆ ಗಂಭೀರ ಗಾಯವಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾಡ್ ಅವರಿಗೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ಹೇಗಾಯಿತು? :

ಅನಿಲ್ ಲಾಡ್ ಸ್ನೇಹಿತರ ಮನೆಗೆ ಹೋಗಿ ವಾಪಸ್ ಬರುವಾಗ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಿದೆ, ಈ ವೇಳೆ ನಾಯಿಗೆ ಡಿಕ್ಕಿಯಾಗದಂತೆ ಕಾರನ್ನು ತಪ್ಪಿಸಲು ಚಾಲಕ ಯತ್ನ ಮಾಡಿದ್ದಾನೆ. ಆಗ ಕಾರು ಮರಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿ ಅನಿಲ್ ಲಾಡ್ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದರು. ಪತ್ನಿ ಗೆ ಸಣ್ಣ , ಪುಟ್ಟ ಗಾಯ ಗಳಾದರೂ ಸೇಫ್ ಆಗಿದ್ದಾರೆಂದು ತಿಳಿದು ಬಂದಿದೆ.

error: Content is protected !!