25 ಸಾವಿರ ರು ಲಂಚ ಸ್ವೀಕಾರ: ಮಂಡ್ಯದಲ್ಲಿ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

Team Newsnap
1 Min Read

ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ, ಮಂಡ್ಯದ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿ ಯೊಬ್ಬರು 25 ಲಂಚ ಸ್ವೀಕಾರ ಮಾಡುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಹೊರ ಗುತ್ತಿಗೆ ಆಧಾರದಲ್ಲಿ 4 ದರ್ಜೆ ನೌಕರನ ನೇಮಕಾತಿ ಕಾಪಿ ನೀಡಲು 25 ಸಾವಿರ ರು ಬೇಡಿಕೆ ಇಟ್ಟಿದ್ದ ಕಚೇರಿ ಅಧೀಕ್ಷಕಿ ವಿಜಯ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಅಧೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹೊರಗುತ್ತಿಗೆ ಆಧಾರದಲ್ಲಿ 4 ನೇ ದರ್ಜೆ ಹುದ್ದೆಗೆ ಶಿಫಾರಸ್ಸಿನ ಆರ್ಡರ್ ಕಾಪಿ ಕೊಡಲು ಮಹದೇವಯ್ಯ ಎಂಬುವವರ ಬಳಿ 25 ಸಾವಿರ ರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಎಸಿಬಿಗೆ ದೂರು ನೀಡಿದ್ದರು.

ಅಧಿಕಾರಿ ವಿಜಯ ಕರ್ತವ್ಯ ನಿರ್ವಹಿಸು ತ್ತಿದ್ದ ಕಚೇರಿಯಲ್ಲೇ ಮಹದೇವಯ್ಯ ಅವರಿಂದ 25 ಸಾವಿರ ರು ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ, ದಕ್ಷಿಣ ವಲಯ, ಮೈಸೂರಿನ ಪೊಲೀಸ್ ಅಧೀಕ್ಷಕ ಡಾ . ಸುಮನ್ ಡಿ ಪಿ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಉಪಾಧೀಕ್ಷ ಹೆಚ್. ಪರಶುರಾಮಪ್ಪ, ಪೊಲೀಸ್ ನಿರೀಕ್ಷಕ ರಾದ ಸತೀಶ್, ಜಿ.ಜೆ ಹಾಗೂ ಪೊಲೀಸ್ ಸಿಬ್ಬಂದಿಗಳು ನಡೆಸಿದ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

ವಿಜಯ ಅವರನ್ನು ದಸ್ತಗಿರಿ ಮಾಡಿ, ಲಂಚದ ಟ್ರಾಪ್ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ

Share This Article
Leave a comment