ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಳೆದ ಬಾರಿ ರಾಜ್ಯದ ಮಂಡ್ಯ ಜಿಲ್ಲೆಯ ಕೆರೆ ಕಾಮೇಗೌಡರ ಬಗ್ಗೆ ಮಾತನಾಡಿದ್ದರು.
ಈ ಬಾರಿಯೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಯುವಕರ ತಂಡದ ಸಾಧನೆಯ ಕುರಿತು ಮಾತನಾಡಿ ಆ ಯುವಕರ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಶ್ರೀರಂಗಪಟ್ಟಣದ ಯುವ ಬ್ರಿಗೇಡ್ ನ ಕಾರ್ಯಕರ್ತರು ಹಾಳು ಕೊಂಪೆಯಾಗಿದ್ದ ನೂರಾರು ವರ್ಷದ ಪ್ರಾಚೀನ ಶಿವ ದೇಗುಲವನ್ನು ಸ್ವಚ್ಚಗೊಳಿಸಿ ಪುನರುಜ್ಜೀವನ ಗೊಳಿಸಿರುವುದನ್ನು ಪ್ರಧಾನಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಶ್ರೀರಂಗಪಟ್ಟಣದ ಗಂಜಾಮ್ ನ ಹೊರವಲಯದಲ್ಲ ಇತಿಹಾಸ ಪ್ರಸಿದ್ದ ವೀರಭದ್ರಸ್ವಾಮಿ ದೇವಸ್ಥಾನ ನಿರ್ವಹಣೆ ಇಲ್ಲದೆ ಶಿಥಿಲವಾಗಿತ್ತು. ಅಲ್ಲದೇ ಯಾರು ಭಕ್ತರು ಹೋಗದ ಕಾರಣಕ್ಕೆ ಆ ದೇವಸ್ಥಾನವು ಸುತ್ತ ಗಿಡಗೆಂಟೆ, ಗಿಡಮರಗಳು ಮುಳುಕಂಟಿಗಳಿಂದ ಮುಚ್ಚಿ ಹೋಗಿತ್ತು,
ಪುರಾತನ ದೇವಸ್ಥಾನ ವನ್ನು ಪತ್ತೆ ಹಚ್ಚಿದ ಯುವ ಬ್ರಿಗೇಡ್ ತಂಡದ 30 ಕ್ಕೂ ಹೆಚ್ಚು ಸದಸ್ಯರು ಆ ದೇವಸ್ಥಾನ ವನ್ನು ಶ್ರಮದಾನದ ಮೂಲಕ ಸ್ವಚ್ಚ ಮಾಡಿ ಆ ದೇಗುಲದ ಸುತ್ತಲು ಬೆಳೆದ ಗಿಡಗೆಂಟೆ ಹಾಗೂ ಮುಳ್ಳುಗಳನ್ನು ಸ್ವಚ್ಚ ಮಾಡಿದ್ದಾರೆ. ಸುಣ್ಣ ಬಣ್ಣ ಮಾಡಿ ವಿದ್ಯುತ್ ಸಂಪರ್ಕಕೊಡಿಸಿ ಜೀರ್ಣೋದ್ದಾರ ಮಾಡಿದ್ದಾರೆ.
ಶಿವನ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸಿ ಇದೀಗ ನಿತ್ಯ ಪೂಜೆಯ ಕೈಂಕರ್ಯ ನೆರವೇರುವಂತೆ ಮಾಡಿದ್ದಾರೆ
ಶ್ರೀರಂಗಪಟ್ಟಣದ ಯುವ ಬ್ರಿಗೇಡ್ ಸದಸ್ಯರ ಈ ಸಾಮಾಜಿಕ ಕಳಕಳಿಯ ಈ ಕಾರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಅಲ್ಲದೇ ಈ ಯುವ ಬ್ರಿಗೇಡ್ ನ ಯುವಕರ ಕಾರ್ಯವನ್ನು ಸ್ವತಃ ಪ್ರಧಾನಿ ಮೋದಿಯವರೇ ಪ್ರಶಂಸಿರುವುದು ಯುವ ಸಮೂಹಕ್ಕೆ ಪ್ರೇರಣೆಯಾಗಿದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ