ದೇಶದ 4 ರಾಜ್ಯಗಳಲ್ಲಿ ಇಂದಿನಿಂದ ಕೊರೋನಾ ಲಸಿಕೆ ಪ್ರಾಯೋಗಿಕ ಪರೀಕ್ಷೆ ಆರಂಭ

Team Newsnap
1 Min Read

ಭಾರತದಲ್ಲಿ ಕೊರೋನಾ ಲಸಿಕೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿ ರುವ ಜೊತೆಯಲ್ಲಿ, ಪಂಜಾಬ್, ಆಂಧ್ರಪ್ರದೇಶ, ಗುಜರಾತ್​ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕೊರೋನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೊರೋನಾ ಲಸಿಕೆಯಲ್ಲಿನ ವಿತರಣೆ ಲೋಪ ಮತ್ತು ಹಂಚಿಕೆಯ ಕಾರ್ಯಕ್ಷಮತೆಯನ್ನು ಗುರುತಿಸುವ ಸಲುವಾಗಿ ಡ್ರೈ ರನ್​ ನಡೆಸಲಾಗುತ್ತಿದೆ.

ವ್ಯಾಕ್ಸಿನ್ ಹಂಚಿಕೆಯ ಪ್ರಾಯೋಗಿಕ ಪರೀಕ್ಷೆಯ ಮೂಲಕ ಕೋವಿಡ್​ ಆ್ಯಪ್​ನ ಕಾರ್ಯ ವೈಖರಿಯು ಪರಿಶೀಲನೆಗೆ ಒಳಪಡಲಿದೆ.

ನಿಯೋಜಿತ ಸಿಬ್ಬಂದಿಗಳ ಕಾರ್ಯ ಕ್ಷಮತೆಯೂ ಈ ಡ್ರೈ ರನ್​ ಮೂಲಕ ಪರಿಶೀಲನೆಗೆ ಒಳಪಡಲಿದೆ. ಈ ಕೆಲಸಕ್ಕೆಂದು ಈವರೆಗೆ ಒಟ್ಟು 6,81,604 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ ಸಿಬ್ಬಂದಿ ನಿರ್ವಹಣೆ ಬಗ್ಗೆಯೂ ಮೇಲ್ವಿಚಾರಣೆ ನಡೆಸಲಾಗುವುದು.

ಆರೋಗ್ಯ ಇಲಾಖೆ ಇಂದಿನಿಂದ ಕೊರೋನಾ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಗೊತ್ತಾಗಿದೆ.

ಮೊದಲು ಜಿಲ್ಲೆ, ಬ್ಲಾಕ್‌ ಮಟ್ಟದಲ್ಲಿ ಶೈತ್ಯಾಗಾರಗಳಿಂದ ಲಸಿಕೆ ಪೂರೈಕೆ ಮಾಡಲಾಗುವುದು.
ಶೈತ್ಯಾಗಾರಗಳಿಂದ ನಿಗದಿತ ಆಸ್ಪತ್ರೆಗಳಿಗೆ ಲಸಿಕೆ ರವಾನೆ ಹಾಗೂ ಅಲ್ಲಿನ ಸಿಬ್ಬಂದಿಗೆ ಲಸಿಕೆ ನಿರ್ವಹಣೆ ಬಗ್ಗೆ ಸೂಚನೆ ನೀಡಿ ಲಸಿಕೆ ಇರುವ ಬಾಕ್ಸ್‌ಗಳ ಹಂಚಿಕೆ ಮಾಡಲಾಗುವುದು.

ಸೋಂಕಿತರಿಗೆ, ವಯೋವೃದ್ಧರಿಗೆ ಲಸಿಕೆ ನೀಡುವ ಪ್ರಕ್ರಿಯೆಯ ಆರಂಭಿಸುವುದು
ಲಸಿಕೆಯ ಡೋಸ್‌ಗಳು ಖಾಲಿಯಾದಲ್ಲಿ ಪುನಃ ತರಿಸಿಕೊಳ್ಳುವುದು. ಆನ್‌ಲೈನ್‌ ವೇದಿಕೆ ‘ಕೋ-ವಿನ್‌’ನಲ್ಲಿ ಅದರ ಅಪ್‌ಲೋಡ್‌ ಮಾಡುವು ವ್ಯವಸ್ಥೆ ಮಾಡಲಾಗಿದೆ.

Share This Article
Leave a comment