ಹಸ್ತಪ್ರತಿಗಾಗಿ ರಾಜ್ಯಮಟ್ಟದ “2019 ನೇ ಸಾಲಿನ ಕವಿ ಗವಿಸಿದ್ದ ಎನ್.ಬಳ್ಳಾರಿ ಕಾವ್ಯಪುರಸ್ಕಾರ” ಪಡೆದಿರುವ ಪತ್ರಕರ್ತ , ಕವಿ ಎನ್. ರವಿಕುಮಾರ್ ಟೆಲೆಕ್ಸ್ ಅವರ “ನೆರ್ಕೆಗೋಡೆಯ ರತ್ನಪಕ್ಷಿ” ಕವನ ಸಂಕಲನವು ಡಿ. 19 ರಂದು ಕೊಪ್ಪಳದ ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಬಿಡುಗಡೆಗೊಳ್ಳಲಿದೆ.
ಖ್ಯಾತ ಹಿರಿಯ ಸಾಹಿತಿ ಡಾ. ಅಲ್ಲಮಪ್ರಭು ಬೆಟ್ಟದೂರು ಅವರು ಕವನ ಸಂಕಲನವನ್ನು ಬಿಡುಗಡೆ ಮಾಡಲಿದ್ದು, ಖ್ಯಾತ ವಿಮರ್ಶಕರು, ಸಂಶೋಧಕರೂ ಆದ ಡಾ. ಜಾಜಿ ದೇವೇಂದ್ರಪ್ಪ, ಕತೆಗಾರ ಡಾ. ಅಮರೇಶ್ ನುಗಡೋಣಿ ಅವರು ಉಪಸ್ಥಿತರಿರುವರು.
ನೆರ್ಕೆಗೋಡೆಯ ರತ್ನಪಕ್ಷಿ ಎನ್. ರವಿಕುಮಾರ್ ಅವರ ಎರಡನೆ ಕವನ ಸಂಕಲನವಾಗಿದೆ. 2018 ರಲ್ಲಿ ಬಿಡುಗಡೆ ಕೊಂಡ “ನಂಜಿಲ್ಲದ ಪದಗಳು” ಚೊಚ್ಚಲ ಕವನ ಸಂಕಲನವೂ ರಾಜ್ಯಮಟ್ಟದ ನಾಲ್ಕು ಪ್ರಶಸ್ತಿಗಳನ್ನು ಪಡೆದಿತ್ತು.
- ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ
- ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
- ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ಸರ್ಚ್ ವಾರೆಂಟ್ ಮುನ್ನವೇ ಕಡತಗಳ ಸ್ಥಳಾಂತರ ಮಾಡಿದ ಲೋಕಾಯುಕ್ತ ಡಿವೈಎಸ್ಪಿ!
- ಮುಡಾ ಹಗರಣ: ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ- ಸ್ನೇಹಮಯಿ ಕೃಷ್ಣ ಆರೋಪ
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)