November 25, 2024

Newsnap Kannada

The World at your finger tips!

deepa1

ದಾರಿ ದೀಪ – 10

Spread the love

ಡಾ.ಶ್ರೀರಾಮ ಭಟ್ಟ

ಸಮಾನತೆ ಸಹಕಾರ

ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ
ಸಂ ಭ್ರಾತರೋ ವಾವೃಧುಃ ಸೌಭಗಾಯ

‘ಯಾರೂ ಮೇಲಲ್ಲ; ಯಾರೂ ಕೀಳಲ್ಲ. ಎಲ್ಲ ಸೋದರರು. ಸಾಮೂಹಿಕ ಒಳಿತಿಗಾಗಿ ಒಟ್ಟಾಗಿ ಹೆಣಗಬೇಕು.’ ಇದು ಋಗ್ವೇದದ ಮಾತು. ಜೀವಿಸುವುದು ಹುಟ್ಟಿದ ಎಲ್ಲ ಜೀವಿಗಳ ಹಕ್ಕು. ಅದು ಹುಳ ಹಪ್ಪಡಿಯಿರಲಿ ಮನುಷ್ಯನೇ ಇರಲಿ, ಪ್ರತಿಯೊಂದು ಜೀವಿಗೂ ಈ ಜಗಚ್ಚಕ್ರದ ಆಗುಹೋಗುಗಳಲ್ಲಿ ತನ್ನದೇ ಆದ ಪಾತ್ರವಿದೆ; ಸ್ಥಾನವಿದೆ. ಏಕೆಂದರೆ ಜಗತ್ ಸ್ವಾಸ್ಥö್ಯದಲ್ಲಿ ಅದರದೇ ಆದ ಕೊಡುಗೆ ಇದೆ. ಹೀಗಿರುವಾಗ ಮೇಲು ಕೀಳು ತಾರತಮ್ಯ ಎಲ್ಲಿ ಬಂತು? ಮನುಷ್ಯ ಪ್ರಪಂಚದ ವ್ಯವಹಾರದಲ್ಲಿ ಎಲ್ಲ ಕಾಲಕ್ಕೂ ತಾರತಮ್ಯ ಇರುವುದಂತೂ ನಿಜ. ಕಣ್ವನ ಆಶ್ರಮದಲ್ಲಿ ಸರ್ವರಿಗೂ ಸಮಾನ ನೆಲೆ. ಅದೇ ದುಷ್ಯಂತನ ಹಸ್ತಿನಾವತಿಯಲ್ಲಿ ರಾಜ ಉಚ್ಚ, ಋಷಿಪತ್ನಿಯೂ ಶಿಷ್ಯರೂ ಸೇರಿದಂತೆ ಮಿಕ್ಕವರೆಲ್ಲ ನೀಚ. ಇದು ‘ನಾಗರಿಕವೃತ್ತಿ’ ಎಂದು ಕಾಳಿದಾಸ ಪರ್ಯಾಯವಾಗಿ ಸೂಚಿಸುತ್ತಾನೆ. ಮುಖ್ಯವಾಗಿ ಆಡಳಿತ ವ್ಯವಸ್ಥೆ ಈ ಶ್ರೇಣಿಯನ್ನು ರೂಪಿಸುತ್ತದೆ. ಶಾಸನ ವ್ಯವಸ್ಥೆಗಾಗಿ ಪ್ರಜಾಹಿತದ ತೋರುಗಾಣಿಕೆಯಲ್ಲಿ ಆಳುವ ಮಂದಿ ಸ್ವಾರ್ಥಸಾಧನೆಯಲ್ಲಿ ತೊಡಗಿರುವುದು ವರ್ತಮಾನದಲ್ಲೂ ನಮ್ಮ ಕಣ್ಣ ಮುಂದಿದೆ. ಆಡಳಿತ ವ್ಯವಸ್ಥೆ ನಿಷ್ಠುರ ನಿಃಸ್ವಾರ್ಥವಾಗಿರಬೇಕೆಂದು ನಿರೀಕ್ಷಿಸಲು ಸಾಧ್ಯವೆ? ಕೌಟಿಲ್ಯನ ಅರ್ಥಶಾಸ್ತçದ ನಿರೀಕ್ಷೆ ಹಾಗಿತ್ತು :

ಪ್ರಜಾ ಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಮ್
ನಾತ್ಮಪ್ರಿಯಂ ಹಿತಂ ರಾಜ್ಞಃ ಪ್ರಜಾನಾಂ ತು ಪ್ರಿಯಂ ಹಿತಮ್

‘ರಾಜನಿಗೆ ಪ್ರಜೆಗಳ ಸುಖವೇ ಸುಖ; ಪ್ರಜೆಗಳ ಹಿತವೇ ಹಿತ. ತನ್ನ ಹಿತ ರಾಜಹಿತವಲ್ಲ; ಸಮಷ್ಟಿ ಪ್ರಜೆಯ ಹಿತವೆ ರಾಜಹಿತ.’ ಆಡಳಿತ ವ್ಯವಸ್ಥೆ ಪ್ರಜಾಭಿಪ್ರಾಯಕ್ಕೆ ಪ್ರಾಶಸ್ತö್ಯ ನೀಡಬೇಕೆನ್ನುವ ಹಲವು ಮಾತುಗಳೂ ನಿದರ್ಶನಗಳೂ ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಇತರ ಗ್ರಂಥಗಳಲ್ಲೂ ಕಾಣಸಿಗುತ್ತವೆ. ಆಡಳಿತ ವ್ಯವಸ್ಥೆ ಸರ್ವಸಮತೆಯನ್ನು ದಾಟಿ ಅಸಮಾನತೆಯನ್ನು ರೂಢಿಸಿದಾಗ ಪ್ರಜೆಯ ಮನದಲ್ಲಿ ಸಮಾನತೆಯ ಆಶಯ ಮೂಡುವುದು ಸಾಧ್ಯವೆ? ಇತಿಹಾಸದುದ್ದಕ್ಕೂ ಒಂದಿಲ್ಲೊAದು ಬಗೆಯಲ್ಲಿ ಶ್ರೇಣೀಕರಣದ ತಾರತಮ್ಯ ಕಂಡುಬರುವುದು ಈ ನೆಲದ ದೌರ್ಭಾಗ್ಯ. ನೆಲದ ನಿದರ್ಶನವನ್ನೆ ಇಟ್ಟುಕೊಂಡು ಆಡಳಿತ ವ್ಯವಸ್ಥೆಗೆ ಸಮತೆಯ ಪ್ರಾಮುಖ್ಯವನ್ನು ತಿಳಿಹೇಳುವ ಭೃಗುಸಂಹಿತೆಯ ಮಾತನ್ನು ಗಮನಿಸಬೇಕು.

ಯಥಾ ಸರ್ವಾಣಿ ಭೂತಾನಿ ಧರಾ ಧಾರಯತೇ ಸಮಮ್
ತಥಾ ಸರ್ವಾಣಿ ಭೂತಾನಿ ಬಿಭ್ರತಃ ಪಾರ್ಥಿವವ್ರತಮ್

‘ಭೂಮಿ ಎಲ್ಲ ಜೀವಿಗಳನ್ನು ಸಮನಾಗಿ ಹೊತ್ತು ಸಲಹಿದೆ. ಹಾಗೆಯೇ ರಾಜನಾದವನು ಏಕ ನಿಷ್ಠೆಯಿಂದ ಎಲ್ಲ ಜೀವಿಗಳನ್ನು ಸಮನಾಗಿ ಪೋಷಿಸಬೇಕು. ಇದು ಪಾರ್ಥಿವವ್ರತ.’ ‘ಪಾರ್ಥಿವ ವ್ರತ’ ಎನ್ನುವ ಮಾತು ತುಂಬ ಅರ್ಥಪೂರ್ಣವಾಗಿದೆ. ವ್ರತ ಆದರ್ಶ ಅಷ್ಟೆ ಅಲ್ಲ, ತಪ್ಪದೆ ನಡೆದು ನಡೆಸಿ ತೋರಬೇಕಾದ ದಿವ್ಯ.
ಭೂಮಿ ಜೀವಿಗಳನ್ನು ಹೊತ್ತಿರುವುದಲ್ಲದೆ, ನೀರು ಅನ್ನಗಳನ್ನು ತಾರತಮ್ಯವಿಲ್ಲದೆ ಸಮನಾಗಿ ಕರುಣಿಸಿದೆ. ನೀರು ಮತ್ತು ಅನ್ನ ಎಲ್ಲ ಜೀವಿಗಳಿಗೆ ದೊರಕುವಂತಾಗುವುದೆ ಸಮತೆಯ ಮೊದಲ ಹಂತ. ಅನ್ನ ನೀರುಗಳನ್ನು ಸಹಕಾರ ತತ್ವದಡಿ ಸರ್ವರೂ ಪಡೆದುಕೊಳ್ಳಬೇಕಾದ ಬಗೆಯನ್ನು ತುಂಬ ಸುಂದರವಾಗಿ ರೂಪಕಾತ್ಮಕವಾಗಿ ನಿರೂಪಿಸಿದ ಮಂತ್ರವೊAದು ಅಥರ್ವವೇದದಲ್ಲಿದೆ :

ಸಮಾನೀ ಪ್ರಪಾ ಸಹ ವೋ ಅನ್ನಭಾಗಃ
ಸಮಾನೇ ಯೋಕ್ತೆçà ಸಹ ವೋ ಯುನಜ್ಮಿ
ಅರಾ ನಾಭಿಮಿವಾಭಿತಃ

‘ನೀರು ದೊರೆಯುವ ಸ್ಥಳ ಜೊತೆಗೆ ಅನ್ನದ ಹಂಚಿಕೆ ಸಮಾನವಾಗಿರಲಿ. ಸಮಾನವಾಗಿ ನೇಗಿಲಿಗೆ ಹೆಗಲು ಕೊಟ್ಟು ಚಕ್ರದ ಗುಂಬದಿAದ ಸುತ್ತಲು ಪರಿಧಿಗೆ ಸೇರುವ ಅರೆಗಳಂತೆ ಸಹಕಾರವಿರಲಿ.’ ಬಂಡಿಯ ನೊಗದಲ್ಲಿ ಸಮಾನತೆ, ಗಾಲಿಯ ಅರೆಗಳಲ್ಲಿ ಸಹಕಾರ. ಅಲ್ಲಿ ಮೇಲಿಲ್ಲ, ಕೀಳಿಲ್ಲ. ಅಲ್ಲಿರುವುದು ಸಮತೆ ಸಹಕಾರಗಳ ಚಕ್ರಗತಿ.

Copyright © All rights reserved Newsnap | Newsever by AF themes.
error: Content is protected !!