ದೆಹಲಿ: ನವೆಂಬರ್ 25 ರಿಂದ ಡಿಸೆಂಬರ್ 20ರವರೆಗೆ ನಿಗದಿಯಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಇಂದು ಆರಂಭವಾಗುತ್ತಿದೆ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 16 ಮಹತ್ವದ ಮಸೂದೆಗಳನ್ನು ಮಂಡಿಸಲು ಸಜ್ಜಾಗಿದೆ. ಆದರೆ, ಈ ಮಸೂದೆಗಳಿಗೆ ಪ್ರತಿಪಕ್ಷಗಳಿಂದ ಭಾರೀ ವಿರೋಧ ಎದುರಾಗುವ ಸಾಧ್ಯತೆಯಿದ್ದು, ಅಧಿವೇಶನ ತೀವ್ರ ವಾಕ್ಸಮರಕ್ಕೆ ವೇದಿಕೆಯಾಗಲಿದೆ.
ಸಂವಿಧಾನ ದಿನದ ವಿಶೇಷ ಆಚರಣೆ:
ಸಂವಿಧಾನ ಅಂಗೀಕಾರದ 75ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲು ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಮಹತ್ವದ ಮಸೂದೆಗಳು:
ಅಧಿವೇಶನದಲ್ಲಿ ಸರ್ಕಾರ, “ಒಂದು ರಾಷ್ಟ್ರ, ಒಂದು ಚುನಾವಣೆ” ಮಾದರಿಯ ನಿರ್ವಹಣೆ ಹಾಗೂ ವಕ್ಫ್ ಆಸ್ತಿ ಕಾಯ್ದೆ ತಿದ್ದುಪಡಿ ಸೇರಿ ಹಲವು ಪ್ರಮುಖ ಮತ್ತು ವಿವಾದಾತ್ಮಕ ಮಸೂದೆಗಳನ್ನು ಮಂಡಿಸಲು ತಯಾರಾಗಿದೆ. ಈ ಬಿಲ್ಲುಗಳು ಸಂಸತ್ತಿನಲ್ಲಿ ರಾಜಕೀಯ ವಾತಾವರಣವನ್ನು ಉಲ್ಬಣಗೊಳಿಸಬಹುದಾಗಿದೆ.
ವಿಪಕ್ಷಗಳ ಆಕ್ರೋಶ:
ಇತ್ತೀಚಿನ ಮಣಿಪುರ ಗಲಭೆಗಳು, ಆಹಾರ ಧಾನ್ಯಗಳ ಬೆಲೆ ಏರಿಕೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ವಿಪಕ್ಷಗಳು ಸರ್ಕಾರವನ್ನು ಚುಡಾಯಿಸಲು ಸಜ್ಜಾಗಿವೆ. ಇದರಿಂದಾಗಿ ಮೊದಲ ದಿನದಿಂದಲೇ ಸಂಸತ್ತಿನ ಕಲಾಪಗಳು ಕಾವೇರುವ ನಿರೀಕ್ಷೆಯಾಗಿದೆ.ಇದನ್ನು ಓದಿ –ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
ಈ ಅಧಿವೇಶನವು ಮಹತ್ವದ ಮಸೂದೆಗಳ ಮಂಡನೆ ಮತ್ತು ರಾಜಕೀಯ ವಾದವಿವಾದಗಳ ಮೂಲಕ ಗಮನ ಸೆಳೆಯುವ ಸಾಧ್ಯತೆಯಿದೆ. ದೇಶದ ಜನತೆಗೆ ಬರುವ ಕೆಲವು ಪ್ರಮುಖ ತೀರ್ಮಾನಗಳು ಈ ಅಧಿವೇಶನದಲ್ಲಿ ಕೈಗೊಳ್ಳಲಾಗುವ ಸಾಧ್ಯತೆ ಇದೆ.
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ