ಮಂಡ್ಯ : ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಒಟ್ಟು 27 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು, 08 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿರುತ್ತದೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕವಾದ ಇಂದು 05 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕುಮಾರ ಅವರು ತಿಳಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಚಿಕ್ಕನಂಜಾಚಾರಿ, ಕೆ. ಶಿವಾನಂದ, ಲೋಲ, ಯೋಗೇಶ್ ಮತ್ತು ಶಿವನಂಜಪ್ಪ ನಾಮಪತ್ರಗಳನ್ನು ಹಿಂಪಡೆದಿರುತ್ತಾರೆ.
ಅಂತಿಮವಾಗಿ ಕಣದಲ್ಲಿರುವ 14 ಅಭ್ಯರ್ಥಿಗಳ ವಿವರ ಇಂತಿದೆ:-
- ಹೆಚ್. ಡಿ. ಕುಮಾರಸ್ವಾಮಿ – ಜನತಾ ದಳ (ಜಾತ್ಯತೀತ),
- ವೆಂಕಟರಮಣೇಗೌಡ – ಭಾರತೀಯ ರಾಷ್ಟೀಯ ಕಾಂಗ್ರೆಸ್,
- ಶಿವಶಂಕರ್.ಎಸ್ – ಬಹುಜನ ಸಮಾಜ ಪಾರ್ಟಿ,
- ಚಂದ್ರಶೇಖರ ಕೆ. ಆರ್ – ಕರ್ನಾಟಕ ರಾಷ್ಟç ಸಮಿತಿ,
- ಬೂದಯ್ಯ – ಕರುನಾಡು ಪಾರ್ಟಿ,
- ಹೆಚ್. ಡಿ. ರೇವಣ್ಣ – ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿ,
- ಲೋಕೇಶ ಎಸ್ – ಉತ್ತಮ ಪ್ರಜಾಕೀಯ ಪಕ್ಷ,
- ಎಸ್. ಅರವಿಂದ್ – ಪಕ್ಷೇತರ,
- ಚನ್ನಮಾಯಿಗೌಡ – ಪಕ್ಷೇತರ, ಚಂದನ್ ಗೌಡ. ಕೆ – ಪಕ್ಷೇತರ,
- ಎನ್. ಬಸವರಾಜು – ಪಕ್ಷೇತರ, ಬೀರೇಶ್. ಸಿ. ಟಿ – ಪಕ್ಷೇತರ,
- ರಾಮಯ್ಯ. ಡಿ – ಪಕ್ಷೇತರ ಹಾಗೂ ರಂಜಿತ. ಎನ್ – ಪಕ್ಷೇತರ.
ಒಟ್ಟು 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಆಮಿಷಗಳಿಗೆ ಒಳಗಾಗದೇ ಮತದಾನ ಮಾಡಿ – ಡಿಸಿ ಡಾ. ಕೆ ವಿ ರಾಜೇಂದ್ರ
ಮತದಾನವು ಏಪ್ರಿಲ್ 26 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು