ವಿಶಾಖಪಟ್ಟಣದಲ್ಲಿ ನಡೆದ INDvsENG ಪಂದ್ಯದಲ್ಲಿ ಭಾರತ 106 ರನ್ ಅಂತರದ ಗೆಲುವು ಸಾಧಿಸಿದೆ. ಗೆಲುವಿಗೆ 399 ರನ್ ಗಳ ಸವಾಲು ಪಡೆದಿದ್ದ ಇಂಗ್ಲೆಂಡ್ 292 ರನ್ ಗಳಿಗೆ ಆಲೌಟಾಯಿತು.
3ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ಪರವಾಗಿ ಕ್ರಾಲಿ 73 ರನ್ ಗಳಿಸಿದರು. ಉಳಿದಂತೆ ಬೆನ್ ಫೋಕ್ಸ್ ಮತ್ತು ಬೌಲರ್ ಟಾಮ್ ಹಾರ್ಟ್ಲಿ ತಲಾ 36 ರನ್ ಗಳ ಕಾಣಿಕೆ ನೀಡಿದರು. ಬೆನ್ ಡಕೆಟ್, ಒಲಿ ಪೋಪ್, ಜಾನಿ ಬೇರಿಸ್ಟೋ ಆರಂಭ ಪಡೆದಾರದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲರಾದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಆಂಗ್ಲ ಬೌಲರ್ ಗಳನ್ನು ಕಟ್ಟಿ ಹಾಕಿದರು. ಇಬ್ಬರು ತಲಾ ಮೂರು ವಿಕೆಟ್ ಕಿತ್ತರು. ಉಳಿದಂತೆ ಮುಕೇಶ್ ಕುಮಾರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಿತ್ತರು.
ಭಾರತದ ಪರ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಹೊಡೆದಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಶುಭ್ಮನ್ ಗಿಲ್ ಶತಕ ಬಾರಿಸಿದ್ದರು. ಈ ಗೆಲುವಿನೊಂದಿಗೆ ಸರಣಿ 1-1 (INDvsENG) ರೊಂದಿಗೆ ಸಮಬಲಗೊಂಡಿದೆ. ಮೂರನೇ ಪಂದ್ಯವು ಫೆ.15ನಿಂದ ರಾಜ್ ಕೋಟ್ ನಲ್ಲಿ ನಡೆಯಲಿದೆ.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ