ಹೊಸದಿಲ್ಲಿ : ನಿನ್ನೆ ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ ಘಟನೆ ನಡೆದ ಬಳಿಕ ಇದೀಗ ಲೋಕಸಭೆ ಸೆಕ್ರೆಟರಿಯೇಟ್ 8 ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಸಂಸತ್ ಭವನದಲ್ಲಿ ಭಾರಿ ಭದ್ರತಾ ಲೋಪವಾಗಿದ್ದು, ಇಬ್ಬರು ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಕಲಾಪದೆಡೆಗೆ ನುಗ್ಗಿ ಗ್ಯಾಸ್ ಕ್ಯಾನಿಸ್ಟರ್ ಗಳನ್ನು ಸಿಡಿಸಿ ಅವ್ಯವಸ್ಥೆ ಸೃಷ್ಟಿಸಿದ್ದರು.
ಭದ್ರತಾ ಲೋಪದ ನಂತರ ಪೊಲೀಸರು ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ .
ಘಟನೆ ಕುರಿತು ಗೃಹ ಸಚಿವಾಲಯವು ಪ್ರಾರಂಭಿಸಿದ್ದು , ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಮುಖ್ಯಸ್ಥರನ್ನು ತನಿಖೆಯ ನೇತೃತ್ವ ವಹಿಸಲು ನೇಮಿಸಲಾಗಿದೆ.
ಘಟನೆಯ ವಿವರ : ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಮನೋರಂಜನ್ ಹಾಗೂ ಸಾಗರ ಶರ್ಮಾ ವೀಕ್ಷಕರ ಗ್ಯಾಲರಿಯಿಂದ ಸುಮಾರು 10ರಿಂದ 12 ಅಡಿ ಎತ್ತರದಿಂದ ಸಂಸದರು ಕುಳಿತಿದ್ದ ಟೇಬಲ್ ಮೇಲೆ ಜಿಗಿದಿದ್ದಾರೆ.
ಮನೋರಂಜನ್ ಹಾಗೂ ಸಾಗರ ಶರ್ಮಾ ಒಂದು ಟೇಬಲ್‌ನಿಂದ ಮತ್ತೂಂದು ಟೇಬಲ್ ಮೇಲೆ ಜಿಗಿಯುತ್ತ ಹುಚ್ಚಾಟ ಮೆರೆದಿದ್ದಾರೆ. ತಮ್ಮ ಶೂಗಳಡಿ ಬಚ್ಚಿಟ್ಟು ತಂದಿದ್ದ ಗ್ಯಾಸ್ ಕ್ಯಾನಿಸ್ಟರ್ (ಹೊಗೆ ಬಾಂಬ್) ಹೊರ ತೆಗೆದು ಸ್ಪ್ರೇ ಮಾಡಿದ್ದಾರೆ.ಕೆಲ ಸಂಸದರು ಆಗಂತುಕರನ್ನು ಹಿಡಿದು, ತದುಕಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ .
ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಘಟನೆ ನಡೆಯುತ್ತಿದ್ದಂತೆ ಸಂಸತ್ ಕಲಾಪ ವೀಕ್ಷಣೆಗೆ ನೀಡಿದ್ದ ಎಲ್ಲ ಪಾಸ್‌ಗಳನ್ನು ರದ್ದುಗೊಳಿಸಿದ್ದಾರೆ.
ಯಾರು ಭದ್ರತೆಯ ಉಸ್ತುವಾರಿ ವಹಿಸಿದ್ದರು ?
ಸಂಸತ್ತಿನ ಭದ್ರತಾ ಸೇವೆಗೆ ಸಂಸತ್ತಿನ ಆವರಣ ಹಾಗೂ ಸುತ್ತಮುತ್ತಲಿನ ಸಂಸದರ ಸುರಕ್ಷತೆಯನ್ನು ವಹಿಸಲಾಗಿದೆ. ಒಟ್ಟಾರೆ ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ .
ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ,ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಇಂಟೆಲಿಜೆನ್ಸ್ ಬ್ಯೂರೋ (ಐಬಿ),ದೆಹಲಿ ಪೊಲೀಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಮತ್ತು ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ನಂತಹ ವಿವಿಧ ಭದ್ರತಾ ಸಂಸ್ಥೆಗಳಿವೆ .ಆಧುನಿಕ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ಹೊಂದಿರುತ್ತಾರೆ .ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
ದೆಹಲಿ ಪೊಲೀಸರು ಸಂಸತ್ತಿನ ಪರಿಧಿಯ ನಿಯಂತ್ರಣವನ್ನು ತೆಗೆದುಕೊಳ್ಳುವಾಗ ಎಸ್ ಡಬ್ಯುಎಟಿ ಕಮಾಂಡೋಗಳ ಮತ್ತು ಶಾರ್ಪ್‌ಶೂಟರ್‌ಗಳಿಂದ ಸಹಾಯ ಪಡೆದಿರುತ್ತಾರೆ .
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )