January 28, 2026

Newsnap Kannada

The World at your finger tips!

tiger , attack , farmer

ನಂಜನಗೂಡಿನ ಮಹಿಳೆ ಬಲಿ ಪಡೆದಿದ್ದ ನರಭಕ್ಷಕ ಹುಲಿ ಸೆರೆ

Spread the love

ಮೈಸೂರು : ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಕಾಡಿನ ಅಂಚಿಗೆ ತೆರಳಿದ ಮಹಿಳೆಯ ಮೇಲೆ ನರಭಕ್ಷಕ ಹುಲಿ ದಾಳಿ ನಡೆಸಿತ್ತು.

ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ(49) ಮೃತ ದುರ್ದೈವಿ. ನರಭಕ್ಷಕ ಹುಲಿಯಿಂದಾಗಿ ಜನರ ಬೆಚ್ಚಿ ಬಿದ್ದಿದ್ದರು ಮತ್ತು ಅದರ ಸೆರೆಗೆ ಒತ್ತಾಯಿಸಿದ್ದರು.

image

ಜನರ ಒತ್ತಾಯದಿಂದಾಗಿ ಹುಲಿ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಗೆ ನಡೆಸುತಿದ್ದರು.

TIGER ATTACK IN MYSORE

ಆತಂಕಕ್ಕೆ ಕಾರಣವಾಗಿದ್ದಂತ ನರ ಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿಅರವಳಿಕೆ ಚುಚ್ಚುಮದ್ದು ನೀಡಿ , ಸೆರೆ ಹಿಡಿದು ಬಂಧಿಸಿದ್ದಾರೆ.

error: Content is protected !!