ಬೆಂಗಳೂರು ನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ ಬೆಂಗಳೂರು ನಗರ

Team Newsnap
1 Min Read

ನಾಡಪ್ರಭು ಕೆಂಪೇಗೌಡರ ನಿರ್ಮಿತವೀ ಬೆಂಗಳೂರು
ಗಂಗ ಚೋಳ ಹೊಯ್ಸಳ ವಿಜಯನಗರದ ಅರಸರು
ಹೈದರಲಿ ಟಿಪ್ಪಸುಲ್ತಾನ ಮೈಸೂರು ಒಡೆಯರಾಳಿದರು ಗಂಡುಭೂಮಿ ನಾಯಕರರಾಜ್ಯವಿದೆಂದು ಕರೆದರು

ಕಲ್ಯಾಣನಗರ ಬೆಂದ ಕಾಳು ಊರು ಬೆಂಗುಳುರು
ಬೆಂದಕಾಡೂರು ಬೆಂಗಾವಲೂರು ಎಂಬ ಹೆಸರು
ಆನೆಕಲ್ ಕೆಂಗೇರಿ ಯಲಹಂಕ ಹಾಗೂ ಕೃಷ್ಣರಾಜಪುರ
ಈ ನಾಲ್ಕು ತಾಲ್ಲೂಕುಗಳಿರುವ ಜಿಲ್ಲೆ ಬೆಂಗಳೂರು

ರಾಜ್ಯದ ರಾಜಧಾನಿ ಹಲವು ಸೊಗಸಿಗೆ ಹಸಿರು ಪ್ರಕೃತಿ
ಸೌಂದರ್ಯ ಹವಾಮಾನ ಆಹಾರ ಶೈಲಿ ಸಂಸ್ಕೃತಿಯ
ಭಿನ್ನತೆಯ ಧಾರ್ಮಿಕ ಕೇಂದ್ರಗಳ ತವರೂರೀ ಊರು
ಸೌಹಾರ್ದ ಸಹಬಾಳ್ವೆಯ ನೆಲೆ ಈ ಜಿಲ್ಲೆ ಬೆಂಗಳೂರು

ಏಷ್ಯಾದಲ್ಲೇ ಮೊದಲು ವಿದ್ಯುತ್ ಚ್ಛಕ್ತಿ ಪಡೆದ ನಗರ
ಏಷ್ಯಾದಲ್ಲೇ ಮೊಟ್ಟ ಮೊದಲು ಬಲ್ಬ್ ಉರಿದ ನಗರ
ಭಾರತದಲ್ಲೇ ಮೊದಲು ಎಫ್ ಎಮ್ ರೇಡಿಯೋ
ಆರಂಭವಾದ ಅನೇಕ ಮೊದಲುಗಳ ಈ ಬೆಂಗಳೂರು

ದೇಶದಲ್ಲೇ ಮೊದಲು ಉಚಿತ ವೈಫೈ ನೀಡಿದ ನಗರವು
ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನ
ಉದ್ಯಾನ ನಗರಿ ಸಿಲಿಕಾನ್ಸಿಟಿ ಕಾಸ್ಮೋ ಪಾಲಿಟನ್ಸಿಟಿ
ಬಯೋಟೆಕ್ ಕ್ಯಾಪಿಟಲ್ ಎಂಬ ಹೆಗ್ಗಳಿಕೆಯ ಈ ಸಿಟಿ

ಪ್ರಪಂಚದಲ್ಲೇ ಹೆಚ್ಚು ದ್ವಿಚಕ್ರ ವಾಹನವಿರುವ ನಗರವು
ದೇಶದ ಹೆಚ್ಚು ಜನಸಾಂದ್ರತೆ ನಗರವೆಂಬ ಈ ನಗರವು
ದೇಶದಲ್ಲೇ ಹೆಚ್ಚು ಧಾರ್ಮಿಕ ಕೇಂದ್ರಗಳ ೨ನೆ ಸ್ಥಾನವು
ದೇಶದ ಅತ್ಯಂತ ಶ್ರೀಮಂತ ನಗರಗಳಲ್ಲಿ ೩ನೆ ಸ್ಥಾನವು

ಹೆಚ್ ಎ ಎಲ್,ಎನ್ ಎ ಎಲ್,ಬಿ ಇ ಎಲ್,ಹೆಚ್ಎಮ್ಟಿ
ಬೆಮೆಲ್,ಐಟಿಐ,ಇಸ್ರೋ ಉತ್ಪಾದಕ ಘಟಕಗಳು
ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆ ನಗರ
ದೇಶದಲ್ಲೇ ಅತಿ ಹೆಚ್ಚು ಇಂಜಿನಿಯರ್ಸ್ ಇರುವ ನಗರ

ಲಾಲ್ ಬಾಗ್ ಕಬ್ಬನ್ ಪಾರ್ಕ್ ಬೆಂಗಳೂರು ಅರಮನೆ
ಬಯಲೋಜಿಕಲ್ ಪಾರ್ಕ್ ಟಿಪ್ಪು ಬೇಸಿಗೆ ಅರಮನೆ
ವಿಶ್ವೇಶ್ವರಯ್ಯ ಮ್ಯುಸಿಯಮ್ ವಿಧಾನಸೌಧದಂತಹ
ರಂಗಶಂಕರ ಕಲಾ ಕ್ಷೇತ್ರ ವೆಂಕಟಪ್ಪ ಕಲಾ ಪರಿಷತ್ತು

ಬನ್ನೆರುಘಟ್ಟ ನ್ಯಾಷನಲ್ ಪಾರ್ಕ್ ಜಿಕೆವಿಕೆ ಮುಂತಾದ
ಸ್ಥಳಗಳಲ್ಲದೆ ಗವಿಗಂಗಾಧರೇಶ್ವರ ಕಾಡುಮಲ್ಲೇಶ್ವರ
ಇಸ್ಕಾನ್ ಟೆಂಪಲ್ ಮತ್ತು ಅಲಸೂರು ಸೋಮೇಶ್ವರ
ಆನೇಕ ಪ್ರಸಿದ್ಧ ಧಾರ್ಮಿಕ ನೆಲೆಯ ದೇವಾಲಯಗಳು

ಸಿ ವಿ ರಾಮನ್,ಅನಿಲ್ ಕುಂಬ್ಳೆ ,ರಾಹುಲ್ ದ್ರಾವಿಡ್
ದೀಪಿಕಾ ಪಡುಕೋಣೆ ಶಂಕರ್ ನಾಗ್ ಕಲಾವಿದರು
ಸಾಹಿತಿಗಳು ಮುಂತಾದ ಖ್ಯಾತ ನಾಮರು ಜನಿಸಿದ ನಮ್ಮ ಹೆಮ್ಮೆಯ ಜಲ್ಲೆ ಇದುವೇ ಬೆಂಗಳೂರು

ಕಲಾವತಿ ಪ್ರಕಾಶ್

(ಬೆಂಗಳೂರು)

(ಜಿಲ್ಲೆ ೨೮)

Share This Article
Leave a comment