December 23, 2024

Newsnap Kannada

The World at your finger tips!

WhatsApp Image 2022 08 24 at 7.17.11 PM

ರಾಜ್ಯದಲ್ಲೂ ಜಾತಿಗಣತಿ ವರದಿಯ ಕೂಗು: ನವೆಂಬರ್ ಮೂರನೇ ವಾರ ವರದಿ ಸಲ್ಲಿಕೆ ಸಾದ್ಯತೆ ?

Spread the love

ಬೆಂಗಳೂರು : ಬಿಹಾರ್ ದಲ್ಲಿ ಆರ್ ಜೆಡಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ, ಬಿಹಾರದ ಜಾತಿಗಣಿತಿವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಸಹ ಜಾತಿ ಗಣತಿ ವರದಿ ಬಿಡುಗಡೆ ಮಾಡುವಂತೆ ಕೂಗು ಎದ್ದಿದೆ.

ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು ಗರಿಗೆದರಿವೆ. ಶೀಘ್ರದಲ್ಲೇ ಜಾತಿ ಗಣತಿ ವರದಿ ಸಲ್ಲಿಕೆ ಸಾಧ್ಯತೆ ಇದೆ.

ಹಿಂದುಳಿದ ವರ್ಗಗಗಳ ಆಯೋಗವು ಈ ಹಿಂದೆ ಕಾಂತರಾಜ್ ಸಮಿತಿಯ ವರದಿಯ ಅಂಕಿ-ಅಂಶ ಆಧರಿಸಿ ಹೊಸ ವರದಿ ಸಿದ್ಧಪಡಿಸಿ ನವೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಸರ್ಕಾರಕ್ಕೆ ಸಲ್ಲಿಸಲು ತಯಾರಿ ನಡೆಸಿದೆ.

ಈಗಾಗಲೇ ವರದಿ ಸಿದ್ದಪಡಿಸಲು ಐದು ಮಂದಿ ತಜ್ಙರನ್ನು ನೇಮಕ ಮಾಡಲಾಗಿದೆ, ಈ ವಾರದಿಂದಲೇ ಮಾಹಿತಿ ಕ್ರೂಢಿಕರಣ ಆರಂಭವಾಗಲಿದೆ. ಹಿಂದುಳಿದ ವರ್ಗಗಳನ್ನು ಮರು ವಿಂಗಡಿಸಿ ಶಿಫಾರಸ್ಸು ಮಾಡುವ ಹಾಗೂ ಹಾಲಿ ಇರುವ ಒಬಿಸಿ ಸಮುದಾಯದ ಮರು ವರ್ಗೀಕರಣ ಮಾಡುವ ನಿರೀಕ್ಷೆ ಇದೆ.ನಿಗೂಢವಾಗಿ ಉಳಿದ ಲಾಲ್ ಬಹೂದ್ದರ್ ಶಾಸ್ತ್ರಿ ಸಾವಿನ ಸತ್ಯ !

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಡಾ ಜಯಪ್ರಕಾಶ್ ಹೆಗಡೆ ಮಾತನಾಡಿ, ಬಿಹಾರದಲ್ಲಿ ಕೊಟ್ಟಿದ್ದು ಜಾತಿ ಗಣತಿ ವರದಿ. ಕರ್ನಾಟಕದ್ದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ. ಕಾಂತರಾಜ್ ಯಾಕೆ ಕೊಟ್ಟಿಲ್ಲ ಎನ್ನುವುದು ನಾನು ಚರ್ಚೆ ಮಾಡಿಲ್ಲ. ಸಾಮಾಜಿಕ ಮತ್ತು ಶೈಕ್ಚಣಿಕ ವರದಿ ಸಲ್ಲಿಸಲು ಸರ್ಕಾರದಿಂದ ಪತ್ರ ಬಂದಿದೆ. ನಾವು ಶೀಘ್ರದಲ್ಲೇ ವರದಿ ಸಲ್ಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು

Copyright © All rights reserved Newsnap | Newsever by AF themes.
error: Content is protected !!