ನಿಗೂಢವಾಗಿ ಉಳಿದ ಲಾಲ್ ಬಹೂದ್ದರ್ ಶಾಸ್ತ್ರಿ ಸಾವಿನ ಸತ್ಯ !

Team Newsnap
2 Min Read

ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಭಾರತ ಕಂಡ ಮೇರು ವ್ಯಕ್ತಿತ್ವದ ಮೊದಲ ಪ್ರಧಾನಿಯೆಂದರೆ ತಪ್ಪಾಗಲಿಕ್ಕಿಲ್ಲ. ಅಂತಹ ಪ್ರಧಾನಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದುಬಿಟ್ಟರಲ್ಲ?

” ಶಾಸ್ತ್ರೀಜಿಯವರು ಸಾಯುವ ಸಮಯದಲ್ಲಿ ಧರಿಸಿದ್ದ ಅಂಗಿ ರಕ್ತದಿಂದ ಕೆಂಪಾಗಿ ಅವರ ಮನೆಯಲ್ಲಿ ಇನ್ನು ಇದೆ. ಹೃದಯಾಘಾತದಿಂದ ಮೃತಪಟ್ಟಿದ್ದರೆ ರಕ್ತದಿಂದ ಒದ್ದೆಯಾಗುತ್ತಿತ್ತೆ???”

ಇಲ್ಲಿಯವರೆಗೂ ಶಾಸ್ತ್ರೀಜಿ ಸಾವಿನ ಬಗ್ಗೆ ಅನುಮಾನ ಇದೆ ಎಂದು ಬರೆಯುತ್ತಾರೆ ಹೊರತು ಖಡಾಖಂಡಿತವಾಗಿ ಕೊಲ್ಲಲಾಗಿದೆ ಅಂತ ಬರೆಯಲ್ಲ. ಅದಕ್ಕೆ ಕಾರಣ ಸಾವಿನ ಬಗೆಗಿನ ಎಲ್ಲಾ ಸಾಕ್ಷಿಗಳನ್ನು ಜಾಣತನದಿಂದ ಅಳಿಸಿ ಹಾಕಿರುವುದು.

ಅಧಿಕಾರವಧಿಯಲ್ಲಿ ದೇಶದ ಪ್ರಧಾನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಾಗ ಅದೂ ವಿದೇಶದಲ್ಲಿ, at least ಶವಪರೀಕ್ಷೆಗೆ ಒಳಪಡಿಸಲು ಸಹ ಕಾಂಗ್ರೆಸ್ ಸರ್ಕಾರ ನಿರಾಕರಿಸಿದ್ದೇಕೆ? ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ಕೊಟ್ಟಿದ್ದೇಕೆ?.
ವಿಷಪ್ರಾಶನದಿಂದ ಸಾವನ್ನಪ್ಪಿದ್ದರು ಎಂಬ ಮಾತುಗಳು ಕೇಳಿಬಂದಾಗಲೂ ಶಾಸ್ತ್ರೀಜಿ ಅವರಿಗೆ ಅಡುಗೆ ಮಾಡಿಕೊಟ್ಟಿದ್ದ ಮಹಮದ್ ಜಾನ್ ಅನ್ನು ವಿಚಾರಣೆಗೆ ಒಳಪಡಿಸಲಿಲ್ಲ….

ಶಿಕ್ಷೆಗೆ ಗುರಿಯಾಗಬೇಕಾದವರು ಪ್ರಮೋಷನ್ ತೆಗೆದುಕೊಂಡರು. ಕೌಲ್ ಗೆ ರಷ್ಯದಲ್ಲಿನ ಭಾರತೀಯ ರಾಯಭಾರಿಯಾಗಿ ಅಧಿಕಾರ ಸಿಕ್ಕರೆ, ಅಡುಗೆ ಭಟ್ಟ ಮಹಮ್ಮದ್ ಜಾನ್ ಗೆ ರಾಷ್ಟ್ರಪತಿ ಭವನದಲ್ಲಿ ಮುಖ್ಯ ಬಾಣಸಿಗನಾಗಿ ನೇಮಿಸಿತು….

1964 ರಲ್ಲಿ ಶಾಸ್ತ್ರೀಜಿಯವರು ಅಣುಬಾಂಬ್ ಪ್ರಯೋಗ ಮಾಡುವುದಕ್ಕೆ ಮುಂದಾಗುತ್ತಾರೆ ಅವರ ಜೊತೆ ಕೈ ಜೋಡಿಸಿದ್ದು ಹೋಮಿ ಜಹಾಂಗೀರ್ ಬಾಬಾ. ಶಾಸ್ತ್ರೀಜಿ ಸಾವನ್ನಪ್ಪಿದ ಎರಡೇ ವಾರದಲ್ಲಿ ಅವರೂ ಸಹ ವಿಮಾನ ಅಪಘಾತದಲ್ಲಿ ಕೊಲ್ಲಲ್ಪಡುತ್ತಾರೆ. ವಿಮಾನಕ್ಕೆ ಕ್ಷಿಪಣಿಯಿಂದ ಉಡಾಯಿಸುತ್ತಾರೆ. ಅದರ ತನಿಖೆಯೂ ನಡೆಯುವದಿಲ್ಲ.

ಇಂತಹ ನೂರಾರು ಸುಳಿವುಗಳು ತಾಸ್ಕೆಂಟ್ ಡೈರಿಯಲ್ಲಿವೆ. ಎಲ್ಲವನ್ನೂ ಇಲ್ಲೇ ಬರೆದರೆ ಹೇಗೆ?…..

ಇದನ್ನ ಬರೆಯಲೇ ಬೇಕು. ನೆಹರು ಪ್ರಧಾನಿಯಾಗಿದ್ದಾಗ 1962 ರಲ್ಲಿ ಚೀನಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿತ್ತು. ದೇಶದಲ್ಲಿ ಆಹಾರ ಕೊರತೆ ಉಂಟಾಯಿತು ಆಗ ನೆಹರು ತಲೆದಂಡ ಒಪ್ಪಿಸಲಿಲ್ಲ, ಅಧಿಕಾರದಿಂದ ಕೆಳಗಿಳಿಯಲಿಲ್ಲ. ನೆಹರು ಸತ್ತ ನಂತರ ಶಾಸ್ತ್ರೀಜಿಯವರು ಪ್ರಧಾನಿ ಆಗ್ತಾರೆ ಆಗ ಪಾಕಿಸ್ತಾನ ಜೊತೆ ಯುದ್ಧವಾಗುತ್ತದೆ ಅದರಲ್ಲಿ ಭಾರತ ಗೆಲ್ಲುತ್ತದೆ ಆದ್ರೆ ಆಗ ಶಾಸ್ತ್ರೀಜಿಯವರನ್ನು ಕೊಲ್ಲಲಾಗುತ್ತದೆ ಇದರರ್ಥವೇನು?

ಭಾರತ ಯಾವಾಗ ಗೆಲುವಿನ ಹಾದಿ ಹಿಡಿಯುತ್ತದೆಯೋ ಆಗ ಆ ಗೆಲುವಿಗೆ ಕಾರಣರಾದವರನ್ನು ಕೊಲ್ಲಲು ಸಂಚು ರೂಪಿಸಲಾಗುತ್ತದೆ. ಈ ಭಯದಿಂದಲೋ ಏನೋ ಮೋದಿಜಿಗೆ Z+ಸೆಕುರಿಟಿ ಒದಗಿಸಿರೋದು. ಶಾಸ್ತ್ರೀಜಿಯವರ ಹತ್ಯೆಯ ಬಗ್ಗೆ ಓದಿದರೆ. Z+ ಸೆಕುರಿಟಿ ಕೊಟ್ಟಿರುವುದು ಸೂಕ್ತವಾಗಿಯೇ ಇದೆ. ಆದ್ರೆ ಅಷ್ಟೋಂದು ಸೆಕುರಿಟಿ ಯಾಕೆ ಅಂತ ಕೆಲವರು ವಿರೋಧಿಸಿದ್ದರು?

ಕೆಲವು ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಎಷ್ಟು ಅಪಾಯಕಾರಿಯೋ ಅಧಿಕಾರದಲ್ಲಿ ಇರದಿದ್ದಾಗ ಇನ್ನೂ ಅಪಾಯಕಾರಿ ಎಂದು ಅಟಲ್ ಜಿ ಹೇಳಿದ ಮಾತು ನಿಜ.

ಪುಸ್ತಕದ ಕೊನೆಯಲ್ಲಿನ ಎರಡು ಪುಟಗಳು ಕಣ್ಣೀರು ತರಿಸಿದ್ದು ಸುಳ್ಳಲ್ಲ. ಅದ್ರಲ್ಲಿ ” ಶಾಸ್ತ್ರೀಜಿಯವರು ಸಾಯುವ ಸಮಯದಲ್ಲಿ ಧರಿಸಿದ್ದ ಅಂಗಿ ರಕ್ತದಿಂದ ಕೆಂಪಾಗಿ ಅವರ ಮನೆಯಲ್ಲಿ ಇನ್ನು ಇದೆ. ಹೃದಯಾಘಾತದಿಂದ ಮೃತಪಟ್ಟಿದ್ದರೆ ರಕ್ತದಿಂದ ಒದ್ದೆಯಾಗುತ್ತಿತ್ತೆ? ಎಂದು ಕೇಳುತ್ತಿದೆ”

ಮತ್ತು ಇನ್ನೊಂದು ಪುಟದಲ್ಲಿನ ಸಾಲು.
“ಶಾಸ್ತ್ರೀಜಿಯವರ ಆತ್ಮ ಕಳೆದ 5 ದಶಕದಿಂದ ನ್ಯಾಯಕ್ಕಾಗಿ ಹಾತೊರೆಯುತ್ತಿದೆ” ಇದನ್ನು ಓದಿ – ಗಾಂಧೀ ಜೀ……

ತಾಸ್ಕೆಂಟ್ ಡೈರಿ ಕೇವಲ ವಿವರಣೆಯ ಪುಸ್ತಕವಲ್ಲ ಅದೊಂದು ಪತ್ತೇದಾರಿ ಪುಸ್ತಕವೆಂದರೂ ತಪ್ಪಿಲ್ಲ. ಅಷ್ಟೆಲ್ಲಾ ಮಾಹಿತಿಗಳನ್ನು ಕಲೆಹಾಕುವುದು ಸುಲಭದ ಮಾತಲ್ಲ .

Share This Article
Leave a comment