November 22, 2024

Newsnap Kannada

The World at your finger tips!

farmers

ತ. ನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ ವಿರೋಧಿಸಿ ರೈತ ಹಿತರಕ್ಷಣಾ ಸಮಿತಿ ಧರಣಿ

Spread the love

ಮಂಡ್ಯ : ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನದಿ ಪ್ರಾಧಿಕಾರ ಆದೇಶವನ್ನು ಧಿಕ್ಕರಿಸಿ ಜಿಲ್ಲಾ ರೈತ ರಕ್ಷಣಾ ಸಮಿತಿ ಮಂಡ್ಯದಲ್ಲಿ ಗುರುವಾರ ಧರಣಿ ಆರಂಭಿಸಿದೆ.

ಮಂಡ್ಯದ ಸರ್ ಎಂ ವಿ ಪ್ರತಿಮೆ ಎದುರು ಸಮಿತಿಯ ಆಶ್ರಯದಲ್ಲಿ ಮಾಜಿ ಶಾಸಕರು, ರೈತರು,ಕನ್ನಡ ಪರ ಹೋರಾಟಗಾರರು. ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೇರಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪ್ರತಿಭಟನಾ ಧರಣಿ ನಡೆಸಿದರು.

ಕಾವೇರಿ ನಮ್ಮದು, ರಕ್ತ ಕೊಟ್ಟರೂ ನೀರು ಬಿಡೆವು ಎಂಬ ಘೋಷವಾಕ್ಯ ದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಒತ್ತಡ ತಂತ್ರದ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ಪ್ರಾಧಿಕಾರ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುಗಡೆಯ ಆದೇಶವೇ ಅವ್ಯೆಜ್ಞಾನಿಕ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಜಲಾಶಯಗಳಿಂದ ನೀರು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದರು.

ತಮಿಳುನಾಡಿಗೆ ಸತತವಾಗಿ ನೀರು ಹರಿಸಿದ ಪರಿಣಾಮ 113 ಅಡಿ ಇದ್ದ ನೀರು 101 ಅಡಿಗೆ ಕುಸಿದಿದೆ. ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಇಲ್ಲದಂತಾಗಿದೆ, ಪ್ರಾಧಿಕಾರದ ಆದೇಶದಂತೆ ಮತ್ತೆ ತಮಿಳುನಾಡಿಗೆ ನೀರು ಬಿಟ್ಟರೆ ಫಸಲು ರಕ್ಷಣೆ ಇರಲಿ ಕುಡಿಯುವ ನೀರು ಕೂಡ ನೀರು ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಟ್ಟಿರುವುದರಿಂದ ಮಂಡ್ಯ, ಮೈಸೂರು, ಬೆಂಗಳೂರು ಸೇರಿ ಎಂಟು ನಗರಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ, ತಕ್ಷಣ ಕಾವೇರಿ ನದಿಗೆ ಬಿಟ್ಟಿರುವ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾವೇರಿ ನದಿ ಪಾತ್ರದಲ್ಲಿನ ವಾಸ್ತವ ಪರಿಸ್ಥಿತಿ ಅರಿಯಲು ಮತ್ತು ಜಲಾಶಯಗಳಲ್ಲಿ ಇರುವ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ನೀರಾವರಿ ತಜ್ಜರ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿ ಕೊಡುವ ಮೂಲಕ ವಾಸ್ತವ ಸ್ಥಿತಿ ಅರಿಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಸೆ.2ಕ್ಕೆ ಜೆಡಿಎಸ್ ಬೃಹತ್ ಹೋರಾಟ 

ಧರಣಿಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಕಾರ್ಯಧ್ಯಕ್ಷ ಮಾಜಿ ಸಚಿವ ಎಂ ಎಸ್. ಆತ್ಮಾನಂದ,ಮಾಜಿ ಶಾಸಕ ಜಿ ಬಿ ಶಿವಕುಮಾರ್, ಕೆ ಟಿ ಶ್ರೀಕಂಠೇಗೌಡ, ಸುನಂದಾ ಜಯರಾಂ, ಬೇಕ್ರಿ ರಮೇಶ್, ಗುರುಪ್ರಸಾದ್ ಕೆರಗೋಡು, ಪ್ರಶಾಂತ ಬಾಬು, ಕೆ ಬೋರಯ್ಯ, ಅಂಬುಜಮ್ಮ, ಸಿದ್ದರಾಮೇಗೌಡ, ಬಿ.ಸಿ.ಶಿವಾನಂದ, ಅಂದಾನಿ ಸೋಮನಹಳ್ಳಿ, ಕನ್ನಡ ಸೇನೆ ಮಂಜುನಾಥ್, ಜಯ ಕರ್ನಾಟಕ ಯೋಗಣ್ಣ, ರೈತ ಸಂಘದ ಇಂಡುವಾಳು ಚಂದ್ರಶೇಖರ್., ಎಂ.ಬಿ ರಮೇಶ್,ಎಸ್ ಕೆ ಮೊಳ್ಳೆಗೌಡ. ಎಂ ಎಲ್ ತುಳಸೀದರ್. ಇಂಡುವಾಳು ಬಸವರಾಜ್ ನೇತೃತ್ವ ವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!